ಮಂಗಳೂರು | ಬಸ್ ಸ್ಟ್ಯಾಂಡ್ ಗೆ ಪೊಲೀಸ್ ಜೀಪ್ ಢಿಕ್ಕಿ: ಇನ್ಸ್ ಪೆಕ್ಟರ್ ಗೆ ಗಾಯ

Prasthutha|

ಮಂಗಳೂರು: ಪೊಲೀಸ್ ಜೀಪ್ ವೊಂದು ಬಸ್ ನಿಲ್ದಾಣಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇನ್ಸ್ ಪೆಕ್ಟರ್ ಗಾಯಗೊಂಡಿರುವ ಘಟನೆ  ಎಡಪದವುನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.

- Advertisement -

ಗಾಯಗೊಂಡ ಮಹಿಳಾ ಇನ್ಸ್ ಪೆಕ್ಟರ್ ರನ್ನು ರೇವತಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಡಪದವು ಹೈಸ್ಕೂಲ್ ಸಮೀಪದ ಬಸ್ ನಿಲ್ದಾಣಕ್ಕೆ ಪೊಲೀಸ್ ಜೀಪ್ ಢಿಕ್ಕಿ ಹೊಡೆದಿದೆ. ಪರಿಣಾಮ ಬಸ್ ನಿಲ್ದಾಣ ಹಾಗೂ ಪಕ್ಕದ ಅಂಗಡಿಗೆ ಹಾನಿಯಾಗಿದೆ.

Join Whatsapp