ಉತ್ತರ ಕರ್ನಾಟಕದಲ್ಲಿ ಕುಸಿಯುತ್ತಿರುವ ಪಕ್ಷವನ್ನು ಮೇಲೆತ್ತಲು, ಹಳೇ ಮೈಸೂರು ಭಾಗದಲ್ಲಿ ಹರಸಾಹಸ ಪಡುತ್ತಿರುವ ಬಿಜೆಪಿ: ಜೆಡಿಎಸ್ ವಾಗ್ದಾಳಿ

Prasthutha|

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕುಸಿಯುತ್ತಿರುವ ಪಕ್ಷವನ್ನು ಮೇಲೆತ್ತಲು, ಹಳೇ ಮೈಸೂರು ಭಾಗದಲ್ಲಿ ಅಮಿತ್ ಶಾ ಮತ್ತು ಬಿಜೆಪಿ ಹರಸಾಹಸ ಪಡುತ್ತಿದೆ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.

- Advertisement -


ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಉತ್ತರ ಕರ್ನಾಟಕದಲ್ಲಿ ಕುಸಿಯುತ್ತಿರುವ ಪಕ್ಷವನ್ನು ಮೇಲೆತ್ತಲು, ಹಳೇ ಮೈಸೂರು ಭಾಗದಲ್ಲಿ ಹರಸಾಹಸ ಪಡುತ್ತಿರುವ ಅಮಿತ್ ಶಾ ಮತ್ತು ಬಿಜೆಪಿಯವರೆ, ಕನ್ನಡದ ಜನತೆ ನಿಮ್ಮ ಶವಪೆಟ್ಟಿಗೆಗೆ ಕೊನೆಯ ಮೂಳೆ ಹೊಡೆಯಲಿದ್ದಾರೆ. ನಿಮ್ಮ ನೌಟಂಕಿ ‘ಸಾಹಸ’ಗಳಿಗೆ ಇತೀಶ್ರಿ ಹಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ನೆಟ್ಟಗೆ ಆಡಳಿತ ನಡೆಸಲು ಬಾರದ ಅಯೋಗ್ಯ ಸಚಿವ ಸಂಪುಟ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಅಮಿತ್ ಶಾ ಅವರಿಗೆ ಜೆಡಿಎಸ್ ಪಕ್ಷದ ಚಿಂತೆ. ತಮ್ಮ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಚಿಂತಿಸಿದ್ದರೆ ಕನಿಷ್ಟಪಕ್ಷ ಜನರಿಗೆ ಉಪಯೋಗವಾಗುವ ನಾಲ್ಕು ಕೆಲಸಗಳನ್ನಾದರೂ ಮಾಡಬಹುದಿತ್ತು. ಅದು ಬಿಟ್ಟು ಮರಾಮೋಸ, ಹಸಿಸುಳ್ಳುಗಳಿಂದ ಜೆಡಿಎಸ್ ಕಟ್ಟಿಹಾಕಬಹುದು ಎಂಬ ಭ್ರಮೆಯಲ್ಲಿದ್ದರೆ ಅದಕ್ಕಿಂತ ನಗೆಪಾಟಲಿನ ಸಂಗತಿ ಇನ್ನೊಂದಿಲ್ಲ ಎಂದು ಜೆಡಿಎಸ್ ಹೇಳಿದೆ.

- Advertisement -

ಅಮಿತ್ ಶಾ ಅವರೆ, ನಿಮ್ಮ ಸುಳ್ಳುಗಳ expiry ಮುಗಿದಿದೆ. ಬಿಜೆಪಿಯ ಸೋಲಿನ ಭಯದಿಂದ ಜೆಡಿಎಸ್ ಬಗ್ಗೆ ‘ಅಣಿಮುತ್ತುಗಳನ್ನು’ ಉದುರಿಸುವುದು ನಿಲ್ಲಿಸಿ. ಇಲ್ಲವಾದರೆ, ಜನರೇ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿಯನ್ನು ಎಚ್ಚರಿಸಿದೆ.

Join Whatsapp