ತಾಯಿಯ ಕಣ್ಣ ಮುಂದೆಯೇ ಮಗ ಅಪಘಾತ ಪ್ರಕರಣ : ಆಕ್ರೋಶಿತ ಸ್ಥಳೀಯರ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು!
Prasthutha: June 29, 2021

►ಅವೈಜ್ಞಾನಿಕ ಚೆಕ್ ಪಾಯಿಂಟ್ ನಲ್ಲಿ ತಪಾಸಣೆ ವೇಳೆ ಟೆಂಪೋ ಡಿಕ್ಕಿ
ಆತೂರಿನ ರಾಮಕುಂಜದಲ್ಲಿ ಪೊಲೀಸ್ ಚೆಕ್ ಪಾಯಿಂಟ್ ನಲ್ಲಿ ಪೊಲೀಸರ ತಪಾಸಣೆ ವೇಳೆ ಟೆಂಪೋ ಒಂದು ಡಿಕ್ಕಿಯಾಗಿ ಯುವಕನೋರ್ವ ತನ್ನ ತಾಯಿಯ ಕಣ್ಣ ಮುಂದೆಯೇ ಮೃತಪಟ್ಟಿದ್ದ. ಈ ಘಟನೆಯ ಬಳಿಕ ಪೊಲೀಸರ ಅವೈಜ್ಞಾನಿಕ ಚೆಕ್ ಪಾಯಿಂಟನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟಿಸಿದ್ದರು. ಪೊಲೀಸರು ಈ ವೇಳೆ ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಕಾರರನ್ನು ಚದುರಿಸಿದ್ದರು. ಆದರೆ ಇದೀಗ ಆಘಾತಕಾರಿ ಘಟನೆಯಲ್ಲಿ, ಸ್ಥಳದಲ್ಲಿ ಪ್ರತಿಭಟಿಸಿದ 10 ಮಂದಿಯ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು, ಪೊಲೀಸರ ಮೇಲೆ ಹಲ್ಲೆ ಮುಂತಾದ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಎಸ್ ಐ ತಿಳಿಸಿದ್ದಾರೆ.
