ಸಿನೆಮಾ ನೀತಿಗೆ ಹೊಸ ತಿದ್ದುಪಡಿ : ನಟ ಕಮಲ್‌ ಹಾಸನ್‌ ತೀವ್ರ ವಿರೋಧ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ಹೊಸ ಪ್ರಸ್ತಾಪಿತ ಸಿನೆಮಾ ನೀತಿಯ ತಿದ್ದುಪಡಿ ಕುರಿತು ಜನಪ್ರಿಯ ನಟ ಕಮಲ್‌ ಹಾಸನ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಕೇಂದ್ರ ಸರಕಾರದ ಹೊಸ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಸಿನೆಮಾ, ಮಾಧ್ಯಮ ಮತ್ತು ಸಾಹಿತ್ಯ ಭಾರತದ ಮೂರು ಆದರ್ಶ ಮಂಗಗಳಂತೆ ಇರಲು ಸಾಧ್ಯವಿಲ್ಲ ಎಂದು ಅವರು ಹೊಸ ತಿದ್ದುಪಡಿಯ ಬಗ್ಗೆ ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ತಿದ್ದುಪಡಿಯಲ್ಲಿ ಸೆನ್ಸಾರ್‌ ಮಂಡಳಿಯ ಮೇಲೆ ಸರಕಾರ ಹೆಚ್ಚಿನ ಹಿಡಿತ ಸಾಧಿಸುವ ಮತ್ತು ಸಿನೆಮಾಗಳ ಮರುಪರಿಶೀಲನೆಗೊಳಪಡಿಡುವ ಅವಕಾಶಗಳಿವೆ ಎನ್ನಲಾಗಿದೆ. ಈ ತಿದ್ದುಪಡಿ ಜಾರಿ ಬಂದರೆ, ಈಗಾಗಲೇ ಸೆನ್ಸಾರ್‌ ಅನುಮೋದನೆ ಪಡೆದಿರುವ ಸಿನೆಮಾಗಳನ್ನೂ ಮರು ವಿಮರ್ಷೆಗೊಳಪಡಿಸುವ ಅಧಿಕಾರ ದೊರೆಯಲಿದೆ ಎನ್ನಲಾಗಿದೆ. ಹೀಗಾಗಿ ಈಗಾಗಲೇ ಸಿನೆಮಾ ರಂಗದ ಹಲವರು ಈ ನೂತನ ತಿದ್ದುಪಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -

Join Whatsapp