ಪಿಎನ್‌ ಬಿ ಹಗರಣ ಆರೋಪಿ ಮೆಹುಲ್‌ ಚೋಕ್ಸಿ ಭಾರತ ಹಸ್ತಾಂತರಕ್ಕೆ ಡೊಮಿನಿಕ್‌ ಕೋರ್ಟ್‌ ತಡೆ

Prasthutha|

ನವದೆಹಲಿ : ಭಾರತದಲ್ಲಿ ಪಿಎನ್‌ ಬಿ ಹಗರಣದ ಬಳಿಕ ತಲೆ ಮರೆಸಿಕೊಂಡು ಆಂಟಿಗುವಾದಿಂದ ನಾಪತ್ತೆಯಾಗಿ, ಡೊಮಿನಿಕಾದಲ್ಲಿ ಬಂಧನಕ್ಕೊಳಗಾಗಿದ್ದ ಮೆಹುಲ್‌ ಚೋಕ್ಸಿಯನ್ನು ಡೊಮಿನಿಕಾದಿಂದಲೇ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಲ್ಲಿನ ಕೋರ್ಟ್‌ ತಡೆ ನೀಡಿದೆ.

ಈ ಆದೇಶವನ್ನು ಪ್ರತಿವಾದಿಗಳಿಗೆ ಮತ್ತು ಡೌಗ್ಲಾಸ್‌ ಚಾರ್ಲ್ಸ್‌ ವಿಮಾನ ನಿಲ್ದಾಣದ ವಲಸೆ ಮುಖ್ಯಸ್ಥರಿಗೂ ಇ-ಮೇಲ್‌, ಫ್ಯಾಕ್ಸ್‌ ಮೂಲಕ ವೈಯಕ್ತಿಕವಾಗಿ ತಕ್ಷಣವೇ ನೀಡಬೇಕು ಎಂದು ಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

- Advertisement -

ತಮ್ಮ ಕಕ್ಷಿದಾರ ಚೋಕ್ಸಿಗೆ ಕಾನೂನು ಸಲಹೆ ಪಡೆಯುವ ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಈ ಹಿಂದೆ ಅವರ ನ್ಯಾಯವಾದಿ ವೆಯ್ನ್‌ ಮಾರ್ಷ್ ಆರೋಪಿಸಿದ್ದರು.

- Advertisement -