ಬೆಂಗಳೂರು ಸಾಮೂಹಿಕ ಅತ್ಯಾಚಾರ ನಡೆಸಿ ವೀಡಿಯೋ ವೈರಲ್ | ಆರೋಪಿಗಳ ಮೇಲೆ ಪೊಲೀಸ್ ಶೂಟೌಟ್

Prasthutha|

ಬೆಂಗಳೂರು: ರಾಮಮೂರ್ತಿನಗರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧಪಟ್ಟಂತೆ ,ಇಬ್ಬರು ಆರೋಪಿಗಳ ಕಾಲಿಗೆ ರಾಮಮೂರ್ತಿನಗರ ಪೊಲೀಸರು ಗುಂಡು ಹಾರಿಸಿದ್ದಾರೆ. 

- Advertisement -

ಇಂದು ಬೆಳಗ್ಗೆ ಸ್ಥಳ ಮಹಜರು ನಡೆಸಲು ಅತ್ಯಾಚಾರ ಆರೋಪಿಗಳನ್ನು ಅವರ ಮನೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಆಗ ಪೊಲೀಸರು ಆತ್ಮ ರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಇನ್ಸ್​ಪೆಕ್ಟರ್​ ಮತ್ತು ಸಬ್​ ಇನ್ಸ್​​ಪೆಕ್ಟರ್​ ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶ ಮೂಲದ 23 ವರ್ಷದ ಯುವತಿಯನ್ನು ರಾಮಮೂರ್ತಿನಗರದ ಮನೆಯೊಂದರಲ್ಲಿ ಕೆಲ‌ ದಿನಗಳ ಹಿಂದೆ ಆರೋಪಿಗಳು ಅತ್ಯಾಚಾರ ಎಸಗಿದ್ದರು. ಅದರ ವಿಡಿಯೊವನ್ನು ಆರೋಪಿಗಳೇ ಚಿತ್ರೀಕರಿಸಿ ಸಾಮಾಜಿಕ‌ ಜಾಲತಾಣಗಳಲ್ಲಿ‌ ಹರಿಬಿಟ್ಟಿದ್ದರು. ವಿಡಿಯೊ ಆಧರಿಸಿ‌ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ನಗರದ ಪೊಲೀಸರು, ನಾಲ್ವರು  ಆರೋಪಿಗಳನ್ನು ಬಂಧಿಸುವಲ್ಲಿ ಗುರುವಾರ ಸಂಜೆ ಯಶಸ್ವಿಯಾಗಿದ್ದರು.

- Advertisement -

ಇನ್ನು ಈ ಕೃತ್ಯವನ್ನು ಖಂಡಿಸಿರುವ ಸಿಎಂ ಯಡಿಯೂರಪ್ಪ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಕೃತ್ಯ ಅಮಾನುಷ ಘಟನೆಯಾಗಿದ್ದು ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಇದೊಂದು ಅಮಾನುಷವಾದ ಘಟನೆ. ಯಾರು ಸಹಿಸಲು ಸಾಧ್ಯವಿಲ್ಲ. ಆರೋಪಿಗಳಿಗೆ ಸರಿಯಾದ ರೀತಿಯ ಶಿಕ್ಷೆಯಾಗಬೇಕು.  ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದರು.

Join Whatsapp