ಅಲ್-ಅಮೀನ್ ಎಜುಕೇಶನಲ್ ಸೊಸೈಟಿಯ ಡಾ. ಮುಮ್ತಾಝ್ ಅಹ್ಮದ್ ಖಾನ್ ನಿಧನ

Prasthutha|

ಬೆಂಗಳೂರು: ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯ ಸ್ಥಾಪಕ ಡಾ. ಮಮ್ತಾಝ್ ಅಹ್ಮದ್ ಖಾನ್ ನಿಧನ ಹೊಂದಿದ್ದಾರೆ. ಅವರು ಶಿಕ್ಷಣ ತಜ್ಞರೂ ಆಗಿದ್ದರು. ಮಮ್ತಾಝ್ ಅವರು ಡೈಲಿ ಸಲಾರ್ ಪತ್ರಿಕೆಯ ಸ್ಥಾಪಕರಾಗಿದ್ದಾರೆ. ಡಾ.ಮುಮ್ತಾಝ್  ಅಹ್ಮದ್ ಖಾನ್ ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಚಾನ್ಸಲರ್ ಆಗಿಯೂ ಕಾರ್ಯನಿರ್ವಹಿಸಿದ್ದರು.  ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮಮ್ತಾಝ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

- Advertisement -

1966 ರಲ್ಲಿ ಅಲ್-ಅಮೀನ್ ಎಜುಕೇಷನಲ್ ಸೊಸೈಟಿಯನ್ನು ಮಮ್ತಾಝ್ ಅವರು ಸ್ಥಾಪಿಸಿದ್ದರು. ಸದ್ಯ ಅಲ್-ಅಮೀನ್ ಸಂಸ್ಥೆಗಳ ಸಮೂಹವು ಕರ್ನಾಟಕ ಹಾಗೂ  ದೇಶಾದ್ಯಂತ 200 ಕ್ಕೂ ಹೆಚ್ಚು ಸಂಖ್ಯೆಯಲ್ಲಿವೆ. ಅಲ್-ಅಮೀನ್ ಸಂಸ್ಥೆಯು ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಶಿಕ್ಷಣ ಸಂಸ್ಥೆ, ಕಾಲೇಜ್ ಆಫ್ ಫಾರ್ಮಸಿ, ಹಾಗೂ ಕಾನೂನು ಕಾಲೇಜು ಸಹಿತ ಅಲ್-ಅಮೀನ್ ಶಿಕ್ಷಣ ಮಹಾವಿದ್ಯಾಲಯದ ತನಕ  ವಿವಿಧ ಕಾಲೇಜುಗಳನ್ನು ಬೆಂಗಳೂರಿನಲ್ಲಿ ಹೊಂದಿದೆ.

ಮಮ್ತಾಝ್ ಅವರು 1990 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. ಅದೇ ರೀತಿ ಕೆಂಪೇಗೌಡ ಪ್ರಶಸ್ತಿ, ಜೂನಿಯರ್ ಜಯೀಸ್ ಪ್ರಶಸ್ತಿ ಹಾಗೂ  ಪಬ್ಲಿಕ್ ರಿಲೇಶನ್ ಸೊಸೈಟಿ ಆಫ್ ಇಂಡಿಯಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದ ಮಮ್ತಾಝ ಅವರು ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಿದ್ದರು.

Join Whatsapp