ಪ್ರವಾದಿ ನಿಂದನೆಯ ಆಕ್ರೋಶದ ಬಳಿಕ ಮೊದಲ ಬಾರಿ ಮುಸ್ಲಿಮ್ ರಾಷ್ಟ್ರ ಯುಎಇಗೆ ನಾಳೆಯಿಂದ ಮೋದಿ ಭೇಟಿ

Prasthutha|

ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ನಾಳೆಯಿಂದ ಯುಎಇ, ಜರ್ಮನಿ ಪ್ರವಾಸ ನಡೆಸಲಿದ್ದಾರೆ.ಈ ವೇಳೆ ಅವರು 15ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ಈ ಪ್ರವಾಸದ ಸಂದರ್ಭದಲ್ಲಿ ಅವರು 12ಕ್ಕೂ ಅಧಿಕ ಜಾಗತಿಕ ನಾಯಕರ ಜೊತೆ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮೋದಿ ಅವರು ಜೂನ್ 26,27 ರಂದು ಜಿ-7 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗವಹಿಸಲು ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 28 ರಂದು ಅವರು ಯುಎಇ ಪ್ರವಾಸ ನಡೆಸಲಿದ್ದು, ಮಾಜಿ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಝಾಹೆದ್ ಅಲ್ ನಹ್ಯಾನ್ ಅವರ ಸಾವಿಗೆ ಸಂತಾಪ ಸೂಚಿಸಲಿದ್ದಾರೆ.

- Advertisement -

ಅಲ್ಲದೆ ಜರ್ಮನಿಯ ಮುನ್’ಶೆನ್ ನಗರದಲ್ಲಿ ಅನಿವಾಸಿ ಭಾರತೀಯ ಆಯೋಜಿಸಿದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ಇದು ಕೋವಿಡ್ ಬಳಿಕ ಅತೀ ದೊಡ್ಡ ಕಾರ್ಯಕ್ರಮವೆಂದು ಹೇಳಲಾಗಿದೆ.

ಈ ಪ್ರವಾಸದ ವೇಳೆ ಉಭಯ ರಾಷ್ಟ್ರಗಳಲ್ಲಿ ಸುಮಾರು 60 ಗಂಟೆಗಳನ್ನು ಕಳೆಯಲಿದ್ದು, ಜಿ-7 ಸದಸ್ಯ ರಾಷ್ಟ್ರಗಳ ಜೊತೆಗೆ ಇತರೆ ರಾಷ್ಟ್ರಗಳ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.



Join Whatsapp