ವಿಶ್ವದ ಟಾಪ್ 100 ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದ ಬೆಂಗಳೂರು

Prasthutha|

ದೆಹಲಿ: ಯಾವುದೇ ದೇಶದಿಂದ ಬಂದಿಳಿಯುವ ಪ್ರಯಾಣಿಕರು ಮೊದಲ ಹೆಜ್ಜೆ ಇಡುವ ವಿಮಾನ ನಿಲ್ದಾಣ ಹೇಗಿದೆ ಎಂಬುದು ಆಯಾ ದೇಶದ ಗೌರವದ ಪ್ರಶ್ನೆಯಾಗಿದೆ. ಪ್ರತಿಯೊಂದು ದೇಶದಲ್ಲಿಯೂ ಈ ಬಗ್ಗೆ ಆಲೋಚನೆ, ಸುಧಾರಣೆ ನಿರಂತರ ನಡೆಯುತ್ತದೆ. ಯಾವುದೇ ದೇಶ ಜಾಗತಿ ಮಟ್ಟದಲ್ಲಿ ಗುರುತಿಸಿಕೊಳ್ಳಲು ವಿಮಾನ ನಿಲ್ದಾಣಗಳ ಪಾತ್ರವೂ ಇದೆ.

- Advertisement -


ಇತ್ತೀಚಿಗೆ ಸ್ಕೈಟ್ರಾಕ್ಸ್‌ ಎಂಬ ಸಂಸ್ಥೆ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2022 ಪಟ್ಟಿಯನ್ನು ಬಿಡುಗೊಳಿಸಿದ್ದು, ವಿಶ್ವದ ಅತ್ಯುತ್ತಮ 100 ವಿಮಾನ ನಿಲ್ದಾಣವಗಳನ್ನು ಹೆಸರಿಸಿದೆ. ಅದರಲ್ಲಿ ಭಾರತದ ನಾಲ್ಕು ಭಾರತೀಯ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿವೆ. ಈ ನಾಲ್ಕು ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಸೇರಿದೆ.

Join Whatsapp