ತಿಂಗಳಾಂತ್ಯಕ್ಕೆ ಪ್ರಧಾನಿ ಮೋದಿ ಯುಎಇ ಭೇಟಿ: ಡ್ಯಾಮೇಜ್ ಕಂಟ್ರೋಲ್ ಗೆ ಯತ್ನ ?

Prasthutha|

ನವದೆಹಲಿ: ಇದೇ ಜೂನ್ ತಿಂಗಳಾಂತ್ಯಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಯುಎಇ’ಗೆ ಭೇಟಿ ನೀಡಲಿದ್ದಾರೆ. ಪ್ರವಾದಿ ಅವಹೇಳನದ ಬಳಿಕ ಯುಎಇ ಸಹಿತ ಅನೇಕ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿ ಛೀಮಾರಿ ಹಾಕಿಸಿಕೊಂಡಿದ್ದ ಭಾರತ ಇದೀಗ ತನಗಾಗಿದ್ದ ಡ್ಯಾಮೇಜ್ ಕಂಟ್ರೋಲ್’ಗೆ ಯತ್ನ ನಡೆಸಿದೆ ಎನ್ನಲಾಗಿದೆ. ದೇಶದಲ್ಲಿ ಪ್ರವಾದಿ ಅವಹೇಳನದ ಬಳಿಕ ಉಂಟಾದ ಬೆಳವಣಿಗೆಗಳ ಬಳಿಕ ಪ್ರಧಾನಿ ಮೋದಿಯ ಮೊದಲ ಮುಸ್ಲಿಂ ರಾಷ್ಟ್ರ ಪ್ರವಾಸ ಇದಾಗಿದೆ.

- Advertisement -


ಜೂನ್ 28ರಂದು ಪ್ರಧಾನಿ ಮೋದಿ, ಇತ್ತೀಚೆಗೆ ನಿಧನರಾದ ಯುಎಇ ರಾಜ ಶೇಖ್ ಖಲೀಫಾ ಬಿನ್ ಝಾಯೇದ್ ಗೌರವಾರ್ಥ ಸಂತಾಪ ಸೂಚಿಸುವ ಸಲುವಾಗಿ ಯುಎಇ ಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಜರ್ಮನಿಯಲ್ಲಿ ನಡೆಯುವ ಜಿ7 ಶೃಂಗ ಸಭೆಯಲ್ಲಿ ಪಾಲ್ಗೊಂಡ ಬಳಿಕ ಹಿಂದಿರುಗುವ ಹಾದಿಯಲ್ಲಿ ಯುಎಇ ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

Join Whatsapp