ಪಿಎಂ ಕೇರ್ಸ್ | ಶಿಕ್ಷಣ ಸಂಸ್ಥೆಗಳಿಂದ 21.81 ಕೋಟಿ ರೂ. ದೇಣಿಗೆ!

Prasthutha|

ಸಾರ್ವಜನಿಕ ವಲಯದ ಕಂಪೆನಿಗಳ ಬಳಿಕ, ಗ್ರಾಮೀಣ ವಿದ್ಯಾರ್ಥಿಗಳಿಗಿರುವ ನವೋದಯ ಶಾಲೆಗಳಿಂದ ಹಿಡಿದು ಐಐಟಿ, ಐಐಎಂ ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳವರೆಗಿನ ಶಿಕ್ಷಣ ಸಂಸ್ಥೆಗಳು ಪಿಎಂ ಕೇರ್ಸ್ ನಿಧಿಗೆ ಬರೊಬ್ಬರಿ 21.81 ಕೋಟಿ ರೂ.ಗಳನ್ನು ದೇಣಿಗೆ ನೀಡಿರುವ ಅಂಶವು ಬೆಳಕಿಗೆ ಬಂದಿದೆ. ಮುಖ್ಯವಾಗಿ ಸಿಬ್ಬಂದಿಯ ಸಂಬಳದಿಂದ ಪಿಎಂ ಕೇರ್ಸ್ ನಿಧಿಗೆ ಈ ದೇಣಿಗೆ ಲಭಿಸಿದೆ ಎಂಬುದಾಗಿ ಆರ್‌ಟಿಐ ದಾಖಲೆಗಳನ್ನು ಉಲ್ಲೇಖಿಸಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಶೋ’ ವರದಿ ಮಾಡಿದೆ.

- Advertisement -

ಆದರೆ, ನಿಧಿಯನ್ನು ನಿರ್ವಹಿಸುತ್ತಿರುವ ಪ್ರಧಾನ ಮಂತ್ರಿಗಳ ಕಚೇರಿಯು, ಇದುವರೆಗೆ ಲಭಿಸಿದ ದೇಣಿಗೆಗಳ ವಿವರಗಳನ್ನು ನೀಡಲು ನಿರಾಕರಿಸಿದ್ದು, ಪಿಎಂ ಕೇರ್ಸ್ ಆರ್‌ಟಿಐ ಕಾಯ್ದೆಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರಾಧಿಕಾರಕ್ಕೆ ಮಾಹಿತಿ ಲಭ್ಯವಿಲ್ಲ ಎಂದು ಹೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗದ ನಿರ್ವಹಣೆಗಾಗಿ ಪಿಎಂ ಕೇರ್ಸ್‌ ನಿಧಿಯನ್ನು ಸ್ಥಾಪಿಸಿದ 5 ದಿನಗಳಲ್ಲಿಯೇ 3,076 ಕೋಟಿ ದೇಣಿಗೆಯು ಹರಿದು ಬಂದಿದ್ದನ್ನು 2020ನೇ ಆರ್ಥಿಕ ವರ್ಷಕ್ಕೆ ಸರ್ಕಾರದ ಆಡಿಟ್ ಬಹಿರಂಗಗೊಳಿಸಿದ್ದರೂ ಕೇಂದ್ರ ಸರಕಾರ ಏಕೆ ಇದುವರೆಗೆ ಸಂಗ್ರಹವಾದ ದೇಣಿಗೆಗಳ ವಿವರವನ್ನು, ದಾನಿಗಳ ಕುರಿತಾದ ವಿವರಣೆಯನ್ನು ಬಹಿರಂಗಗೊಳಿಸಿಲ್ಲ ಎಂಬುದಾಗಿ ಪಿ.ಚಿದಂಬರಂ ಪ್ರಶ್ನಿಸಿದ್ದರು.

Join Whatsapp