ಶಾಹೀನ್ ಬಾಗ್ ನ ಈ ‘ದಾದಿ’ ವಿಶ್ವದ 100 ಪ್ರಭಾವೀ ವ್ಯಕ್ತಿಗಳಲ್ಲಿ ಒಬ್ಬರು

Prasthutha|

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಪ್ರಬಲ ಧ್ವನಿ 82ರ ಹರೆಯದ ಈ ವೃದ್ಧೆ

ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾಹೀನ್ ಬಾಗ್ ಆಂದೋಲನದ ನಾಯಕಿ ಬಿಲ್ಕೀಸ್ ಸ್ಥಾನ ಪಡೆದಿದ್ದಾರೆ. ಟೈಮ್ ಮ್ಯಾಗಝಿನ್ 2019ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚು ಪ್ರಭಾವ ಬೀರಿದ ಜನರನ್ನು ಆಯ್ಕೆ ಮಾಡಿದ್ದು, ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ 82ರ ಹರೆಯದ ಬಿಲ್ಕೀಸ್ ಕೂಡ ಒಬ್ಬರಾಗಿದ್ದಾರೆ. ಎಲ್ಲರೂ ಬಿಲ್ಕೀಸ್ ರನ್ನು ಶಾಹೀನ್ ಬಾಗ್ ನ ದಾದಿ (ಶಾಹೀನ್ ಬಾಗ್ ನ ಅಜ್ಜಿ) ಎಂದು ಕರೆಯುತ್ತಾರೆ.

- Advertisement -

ದೆಹಲಿಯ ಶಾಹೀನ್ ಬಾಗ್ ನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯಲ್ಲಿ ಅವರು, ವೃದ್ಧೆಯಾಗಿದ್ದೂ ಮಸುಕಾಗದೆ ಪ್ರಬಲ ಧ್ವನಿಯಾಗಿ ಸುದ್ದಿಯಾಗಿದ್ದರು. ಪೌರತ್ವ ತಿದ್ದುಪಡಿ ಮಸೂದೆಯನ್ನು ಸರಕಾರ 2019ರ ಡಿಸೆಂಬರ್ ನಲ್ಲಿ ಅಂಗೀಕರಿಸಿದೆ. ಇದರ ನಂತರ ದೇಶಾದ್ಯಂತ ಭಾರೀ ಆಂದೋಲನ ನಡೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವಕರಿಗೆ ಬಿಲ್ಕಿಸ್ ಸ್ಫೂರ್ತಿ ಎಂದು ಪ್ರಮುಖ ಪತ್ರಕರ್ತೆ ರಾಣಾ ಅಯ್ಯೂಬ್ ಹೇಳಿದ್ದಾರೆ.

ಪ್ರತಿಭಟನೆಯ ಸಮಯ ಜನಸಂದಣಿಯಲ್ಲಿ ಬಿಲ್ಕೀಸ್ ರನ್ನು ಮೊದಲ ಬಾರಿಗೆ ನೋಡಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಬೆಳಿಗ್ಗೆ 8 ಗಂಟೆಗೆ ಪ್ರತಿಭಟನಾ ಸಭೆಗೆ ಆಗಮಿಸುತ್ತಿದ್ದ ಅವರು, ಮಧ್ಯರಾತ್ರಿಯ ವರೆಗೂ ಪ್ರತಿಭಟನೆಯ ಭಾಗವಾಗುತ್ತಿದ್ದರು ಎಂದು ರಾಣಾ ಅಯ್ಯೂಬ್ ಹೇಳುತ್ತಾರೆ. ಈ ದೇಶದ ಮಕ್ಕಳು ಸಮಾನತೆ ಮತ್ತು ನ್ಯಾಯದ ಗಾಳಿ ಉಸಿರಾಡುವಂತಾಗಲು, ನನ್ನ ರಕ್ತನಾಳಗಳಲ್ಲಿ ರಕ್ತದ ಹರಿವು ನಿಲ್ಲುವವರೆಗೂ ಈ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಬಿಲ್ಕೀಸ್ ಅಂದು ಹೇಳಿರುವುದನ್ನು ರಾಣಾ ನೆನಪಿಸಿಕೊಳ್ಳುತ್ತಾರೆ.

- Advertisement -