ವಾಷಿಂಗ್ಟನ್ : 12 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಫೈಜರ್-ಬಯೊಎನ್ಟೆಕ್ ಲಸಿಕೆಯ ತುರ್ತು ಬಳಕೆಗೆ ಅಮೇರಿಕಾ ಅನುಮತಿ ನೀಡಿದೆ. ಕೊರೊನಾ ಲಸಿಕೆಯನ್ನು 12-15 ವರ್ಷ ವಯಸ್ಸಿನವರಿಗೂ ನೀಡಲು ಅನುಮತಿ ನೀಡಬೇಕು ಎಂದು ಕಳೆದ ವಾರ ಫೈಜರ್-ಬಯೊ ಎನ್ಟೆಕ್ ಅಮೇರಿಕಾ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಎಫ್ಡಿಎ, ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದೆ. ಈ ನಿಟ್ಟನಿಲ್ಲಿ ಲಸಿಕೆಯ ಬಳಕೆಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಮಾದ್ಯಮ ಸಂಸ್ಥೆಯೊಂದು ವರದಿ ಮಾಡಿದೆ.
16 ವರ್ಷ ಮೇಲ್ಪಟ್ಟವರಿಗೂ ಫೈಜರ್-ಬಯೊಎನ್ಟೆಕ್ ಕೊರೊನಾ ಲಸಿಕೆಯನ್ನು ನೀಡಲು ಅಮೇರಿಕಾದಲ್ಲಿ ಅನುಮತಿ ಇದೆ.
ಕೊರೊನಾ ಲಸಿಕೆಯನ್ನು 12-15 ವರ್ಷ ವಯಸ್ಸಿನವರಿಗೂ ನೀಡಲು ಅನುಮತಿ ನೀಡುವಂತೆ ಕೋರಿ ಇತ್ತೀಚೆಗೆ ಯುರೋಪ್ ಒಕ್ಕೂಟದ ಔಷಧ ನಿಯಂತ್ರಕರಿಗೂ ಕೂಡಾ ಮನವಿ ಸಲ್ಲಿಸಿತ್ತು.
ಅಮೇರಿಕಾದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಫೈಜರ್ ಲಸಿಕೆ ತುರ್ತು ಬಳಕೆಗೆ ಅನುಮತಿ
Prasthutha|