ಬಾಡಿ ಬಿಲ್ಡರ್ ಮನೋಜ್ ಹತ್ಯೆ ಪ್ರಕರಣ : ಕೋಮು ಗಲಭೆಗೆ ಪ್ರಚೋದನೆ ನೀಡಿದ ಸಂಘಪರಿವಾರದ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

► ‘ರಾಜಕೀಯ ಬೇಳೆ ಬೇಯಿಸಲು ಮೃತ ಯುವಕನನ್ನು ಸಂಘದ ಕಾರ್ಯಕರ್ತನೆಂದ  ಸಂಘಪರಿವಾರದ ನಡೆ ಖಂಡನೀಯ’

- Advertisement -

ಚಿಕ್ಕಮಗಳೂರು : ಪ್ರೀತಿ ಪ್ರೇಮ ವಿಚಾರದಲ್ಲಿ  ಯುವಕರ ಗುಂಪಿನ ನಡುವೆ  ಹೊಡೆದಾಟ ನಡೆಯುತ್ತಿದ್ದ ಸಂದರ್ಭದಲ್ಲಿ ತಡೆಯಲು ಮುಂದಾದ ಬಾಡಿ ಬಿಲ್ಡರ್ ಮನೋಜ್ ಎಂಬ ಯುವಕನಿಗೆ ಆ ಗುಂಪು ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ನಡೆಸಿದ ಕೃತ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡಿಸುತ್ತದೆ.  ಹಲ್ಲೆಯಿಂದ ಯುವಕ ಮೃತಪಟ್ಟಿರುವ ವಿಚಾರ ನಗರಾದ್ಯಂತ ಹಬ್ಬುತ್ತಿದ್ದಂತೆ ಸಂಘಪರಿವಾರ ಸಂಘಟನೆಗಳ ಮುಖಂಡರು ಶುಕ್ರವಾರ ಬೆಳಗ್ಗೆ ನಗರದ ಜಿಲ್ಲಾಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿ ಮೃತ ಯುವಕ ಸಂಘಪರಿವಾರದ ಸಕ್ರಿಯ ಕಾರ್ಯಕರ್ತ ಎಂದು ವಾದಿಸಿ ರಾಜಕೀಯ ಬೇಳೆ ಬೇಯಿಸಲು ಯತ್ನಿಸಿರುವುದು ಖಂಡನಾರ್ಹವಾಗಿದೆ.

ಇದೇ ವೇಳೆ ಸಂಘಪರಿವಾರ ಸಂಘಟನೆಗಳ ಮುಖಂಡರು ಮೃತದೇಹವನ್ನು ಪಡೆಯದೇ ನಗರದ ಆಜಾದ್ ಪಾರ್ಕ್ ವೃತ್ತಕ್ಕೆ ಆಗಮಿಸಿ ಸಂಘಪರಿವಾರದ ಕಾರ್ಯಕರ್ತನನ್ನು ಅನ್ಯ ಕೋಮಿನ ಯುವಕರು ಕೊಲೆ ಮಾಡಿದ್ದಾರೆಂದು ಆರೋಪಿಸಿ  ನಗರದ ಎಂಜಿ ರಸ್ತೆ, ಐ ಜಿ ರಸ್ತೆಗೆ ತೆರಳಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸಿ ಅಂಗಡಿಗಳ ಮಾಲೀಕರಿಗೆ ಬೆದರಿಕೆ  ಹಾಕಿದ್ದಲ್ಲದೆ, ಎಂ.ಜಿ ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರ ದೇವಾಲಯದ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ಮುಸ್ಲಿಮರು ಹೆಚ್ಚಿರುವ ಅಂಡೇಛತ್ರ ಮೊಹಲ್ಲಾದಲ್ಲಿ ಅಂಗಡಿಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಅಲ್ಲೂ ಪ್ರತಿಭಟನೆ ನಡೆಸಿದಲ್ಲದೇ, ಸಂಘಪರಿವಾರದ ಮುಖಂಡ ದೇವರಾಜ್ ಶೆಟ್ಟಿ, ಶ್ರೀ ರಾಮ ಸೇನೆಯ ಮುಖಂಡ ರಂಜೀತ್ ಶೆಟ್ಟಿ ನೇತೃತ್ವದಲ್ಲಿ ಹನುಮಂತಪ್ಪ ವೃತ್ತದಲ್ಲಿ ಸಮಾವೇಶಗೊಂಡು ಮುಸ್ಲಿಮರ ವಿರುದ್ಧ ದ್ವೇಷಭರಿತ ಭಾಷಣ ಮಾಡಿ, ಕೋಮು ಪ್ರಚೋದನಕಾರಿ ಘೋಷಣೆ ಕೂಗಿ ಚಿಕ್ಕಮಗಳೂರು ನಗರದಲ್ಲಿ ಕೋಮು ದ್ವೇಷ  ಹರಡಿಸುವ ಹುನ್ನಾರವನ್ನು ಮಾಡಿದ್ದಾರೆ.

- Advertisement -

ಪ್ರಕರಣವನ್ನು ಮುಂದಿಟ್ಟು ಸಂಘ ಪರಿವಾರದ ಸಂಘಟನೆಗಳು ಗಲಭೆನಡೆಸಿ ನಗರಕ್ಕೆ ಬೆಂಕಿ ಇಡಲು ಪ್ರಯತ್ನಿಸಿರುವುದು ನಾಡಿನ ಜನತೆ ತಲೆತಗ್ಗಿಸುವಂತೆ ಮಾಡಿದೆ. ಕ್ಷುಲ್ಲಕ ಕಾರಣಕ್ಕಾಗಿ ಹೊಡೆದಾಟ ನಡೆಸುತ್ತಿದ್ದ ಗುಂಪನ್ನು ತಡೆಯಲು ಮುಂದಾದ ಬಾಡಿ ಬಿಲ್ಡರ್ ಮನೋಜ್ ಎಂಬ ಯುವಕನನ್ನು ಹಲ್ಲೆ ನಡೆಸಿ ಹತ್ಯೆ ನಡೆಸಿದ ಆರೋಪಿಗಳ ವಿರುದ್ಧ ಮತ್ತು ಹಿಂದು ಮುಸ್ಲಿಮರು ಪರಸ್ಪರ ಅನ್ಯೋನ್ಯತೆಯಿಂದ ಬಾಳುತ್ತಿರುವ ಶಾಂತಿಯುತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಹುನ್ನಾರ ನಡೆಸಿ ಕೋಮು ಗಲಭೆ ನಡೆಸುವ ಷಡ್ಯಂತ್ರ ನಡೆಸಿದ ಹಾಗೂ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಸಂಘಪರಿವಾರದ ಮುಖಂಡ ದೇವರಾಜ್ ಶೆಟ್ಟಿ, ಶ್ರೀ ರಾಮ ಸೇನೆ ಮುಖಂಡ ರಂಜೀತ್ ಶೆಟ್ಟಿ ಹಾಗೂ ಇನ್ನಿತರ ಸಂಘ ಪರಿವಾರದ ಮುಖಂಡರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಝಮೀರ್ ಬಾಷರವರು  ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp