ಅಚ್ಛೇ ದಿನ್ | ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 100 ಆಗಲು 1 ರೂ.ಯಷ್ಟೇ ಬಾಕಿ!

Prasthutha|

ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ರಾಕೆಟ್ ವೇಗದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇಂದು ಬಿಜೆಪಿ ಆಡಳಿತದ ಮಧ್ಯಪ್ರದೇಶದ ಅನುಪುರದಲ್ಲಿ ಗರಿಷ್ಠ ಪೆಟ್ರೋಲ್ ಗೆ ಲೀಟರ್ ಗೆ 98.55 ರೂ.ಗೆ ಏರಿಕೆಯಾಗಿದೆ. ಆ ಮೂಲಕ ಸಾಮಾನ್ಯ ಪೆಟ್ರೋಲ್ ಗೆ ಲೀಟರ್ ಗೆ 100 ರೂ. ಗಡಿ ತಲುಪಲು ಇನ್ನು ಕೇವಲ ರೂ. 1.45 ಮಾತ್ರ ಬಾಕಿಯಿದೆ. ಮಧ್ಯಪ್ರದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಲೀಟರ್ ಗೆ ರೂ. 97ರ ಗಡಿ ದಾಟಿದೆ.

- Advertisement -

ಬೆಂಗಳೂರಿನಲ್ಲಿ ಪೆಟ್ರೋಲ್ 91.09 ರೂ., ಡೀಸೆಲ್ 83.09 ರೂ. ಭೋಪಾಲ್ ನಲ್ಲಿ ಪೆಟ್ರೋಲ್ 96.08 ರೂ., ಡೀಸೆಲ್ 86.48 ರೂ., ಮುಂಬೈನಲ್ಲಿ ಪೆಟ್ರೋಲ್ 94.64 ರೂ., ಡೀಸೆಲ್ 85.32 ರೂ. ಆಗಿದೆ.

ಜೈಪುರದಲ್ಲಿ ಪೆಟ್ರೋಲ್ 94.55 ರೂ., ಡೀಸೆಲ್ 86.65 ರೂ., ಪಾಟ್ನಾದಲ್ಲಿ ಪೆಟ್ರೋಲ್ 90.55 ರೂ., ಡೀಸೆಲ್ 83.58, ಚೆನ್ನೈನಲ್ಲಿ ಪೆಟ್ರೋಲ್ 90.44 ರೂ., ಡೀಸೆಲ್ 83.52 ರೂ. ಆಗಿದೆ.

- Advertisement -

ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಇದಕ್ಕೂ ತಮಗೂ ಏನೂ ಸಂಬಂಧವೇ ಇಲ್ಲವೆಂಬಂತೆ ಸರಕಾರಗಳು ವರ್ತಿಸುತ್ತಿವೆ. ಮೊದಲೆಲ್ಲಾ 50 ಪೈಸೆ, 1 ರೂ. ಏರಿಕೆಯಾದರೂ ಬೊಬ್ಬಿಡುತ್ತಿದ್ದ ಮುಖ್ಯವಾಹಿನಿ ಮಾಧ್ಯಮಗಳೂ ಈ ಬಗ್ಗೆ ಈ ದಿನಗಳಲ್ಲಿ ಮೌನಕ್ಕೆ ಶರಣಾಗಿವೆ. ಪ್ರತಿಪಕ್ಷಗಳೂ ದೊಡ್ಡ ಮಟ್ಟದಲ್ಲಿ ಗಂಭೀರವಾಗಿ ಧ್ವನಿ ಎತ್ತುತ್ತಿಲ್ಲ. ಇದರ ಪರಿಣಾಮವಾಗಿ ಜನ ಸಾಮಾನ್ಯರು ಬೆಲೆ ಏರಿಕೆಯ ಬಿಸಿ ಅನುಭವಿಸುವಂತಾಗಿದೆ.



Join Whatsapp