ಚುನಾವಣೆ ಮುಗಿಯಲಿ, ಮಮತಾ ‘ಜೈ ಶ್ರೀರಾಮ್’ ಘೋಷಣೆ ಕೂಗಲು ಪ್ರಾರಂಭಿಸುತ್ತಾರೆ : ಅಮಿತ್ ಶಾ

Prasthutha|

- Advertisement -

ಕೊಲ್ಕತ್ತಾ : ಚುನಾವಣೆ ಮುಗಿದ ಮೇಲೆ ಮಮತಾ ‘ಜೈ ಶ್ರೀರಾಮ್’ ಘೋಷಣೆ ಕೂಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್‌ನಲ್ಲಿ ನಡೆದ ಪರಿವರ್ತನಾ ರ್ಯಾ ಲಿಯಲ್ಲಿ ಅಮಿತ್ ಶಾ ಮಾತನಾಡುತ್ತಿದ್ದರು.

“ಜೈ ಶ್ರೀರಾಮ್ ಘೋಷಣೆ ಬಂಗಾಳದಲ್ಲಿ ಏಕೆ ಅಪರಾಧ? ಜೈ ಶ್ರೀರಾಮ್ ಘೋಷಣೆ ಭಾರತದಲ್ಲಿ ಅಲ್ಲದೆ ಪಾಕಿಸ್ತಾನದಲ್ಲಿ ಮೊಳಗಬೇಕಾ? ಜೈ ಶ್ರೀರಾಮ್ ಘೋಷಣೆ ಕೂಗುವಾಗ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋಪಗೊಳ್ಳುತ್ತಾರೆ. ಚುನಾವಣೆಯು ಮುಗಿಯಲಿ, ಮಮತಾ ಬ್ಯಾನರ್ಜಿ ಕೂಡ ಜೈ ಶ್ರೀರಾಮ್ ಘೋಷಣೆ ಕೂಗಲಾರಂಭಿಸುತ್ತಾರೆ ”ಎಂದು ಅಮಿತ್ ಶಾ ಹೇಳಿದ್ದಾರೆ. ಈ ಹಿಂದೆ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಾಗ ಬಿಜೆಪಿ ಕಾರ್ಯಕರ್ತರು ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದರು. ಇದನ್ನು ಪ್ರತಿಭಟಿಸಿ ಮಮತಾ ತನ್ನ ಭಾಷಣವನ್ನು ಅರ್ಧದಲ್ಲಿ ನಿಲ್ಲಿಸಿದ್ದರು.

Join Whatsapp