ಸರಕಾರದ ಒಳಗೆ ನುಸುಳಿರುವ ಸಂಘೀ ಮನಸ್ಥಿತಿಯ ವ್ಯಕ್ತಿಗಳನ್ನು ಗುರುತಿಸಿ ಅದರ ವಿರುದ್ಧ ಹೋರಾಟ ಕೈಗೊಳ್ಳಬೇಕು: ರಿಯಾಝ್ ಫರಂಗಿಪೇಟೆ ಕರೆ

Prasthutha|

ಮಂಗಳೂರು: ಸರಕಾರದ ಒಳಗೆ ನುಸುಳಿ ಜನವಿರೋಧಿ ಕೆಲಸಗಳ ಮೂಲಕ ಜನಕಂಟಕರಾಗಿರುವ ಸಂಘೀ ಮನಸ್ಥಿತಿಯ ಜನರನ್ನು ಗುರುತಿಸಿ ಅದರ ವಿರುದ್ಧ ಸಂವಿದಾನಾತ್ಮಕವಾಗಿ ಹೋರಾಟ ಮಾಡುವ ಮೂಲಕ ಜನಸಾಮಾನ್ಯರ ಸಮಸ್ಯೆಗೆ SDPI ಕಾರ್ಯಕರ್ತರು ಸಕರಾತ್ಮಕವಾಗಿ ಸ್ಪಂದಿಸಬೇಕು ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾದ ರಿಯಾಜ್ ಫರಂಗಿಪೇಟೆ ಕರೆ ನೀಡಿದರು.

- Advertisement -

ಮಂಗಳೂರು ಬಂದರಿನ ಝೀನತ್ ಬಕ್ಷ್ ಯತೀಮ್ ಖಾನಾ ಹಾಲ್‌ನಲ್ಲಿ ನಡೆದ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಖ್ಯ ಅತಿಥಿಯಾಗಿ ಬಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಿಯಾಝ್ ರವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಇಲ್ಲಿನ ಶೋಷಿತ ಸಮುದಾಯದ ಸಮಸ್ಯೆ ಬಗೆ ಹರಿಯಿತು ಎಂಬುದು ಕೇವಲ ಭ್ರಮೆ ಮಾತ್ರ. ನೂತನ ಶಾಸಕರಿಗೆ ನಡೆಸಲು ಉದ್ದೇಶಿಸಿರುವ ಮೋಟಿವೇಶನ್ ತರಗತಿಯನ್ನು ಸಂಘ ಪರಿವಾರದಿಂದ ಕೊಡಲು ಉದ್ದೇಸಿರುವ ಕಾಂಗ್ರೆಸ್ಸಿನ ಮೃದು ಹಿಂದುತ್ವವನ್ನು ಜನತೆ ಅರ್ಥ ಮಾಡಿಕೊಳ್ಳ ಬೇಕು. ಪ್ರವಾದಿ ಇಬ್ರಾಹಿಂ ಮತ್ತು ಮೂಸರವರು ನ್ಯಾಯದ ಉಳಿವಿಗಾಗಿ ಸೃಷ್ಟಿಕರ್ತನ ಮೇಲೆ ಭರವಸೆ ಇಟ್ಟು ಹಲವಾರು ಪರೀಕ್ಷೆಗಳನ್ನು ಎದುರಿಸಿ ಹೇಗೆ ವಿಜಯದ ಪತಾಕೆ ಹರಿಸಿದ್ರಾ ಅದೇ ರೀತಿ ನಾವು ನ್ಯಾಯದ ಪರವಾದ ಹೋರಾಟದ ರಾಜಕೀಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು ಮಾತ್ರ ಸೋಲಿಸಬಹುದೇ ಹೊರತು ದೇಶದೆಲ್ಲೆಡೆ ಹರಡಿ ಕೊಂಡಿರುವ ಮಾರಕ ಸಂಘಪರಿವಾರದ ಸಿದ್ದಾಂತವನ್ನಲ್ಲ ಎಂಬ ಕಟು ಸತ್ಯವನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

- Advertisement -


ಸಂಘಪರಿವಾರದ ಫ್ಯಾಸಿಸಂ ಸಿದ್ದಾಂತವನ್ನು ಸೋಲಿಸಲು ಎಸ್.ಡಿ.ಪಿ.ಐ ಯಿಂದ ಮಾತ್ರ ಸಾಧ್ಯ ಎಂಬುದನ್ನು ವಿವರಿಸಿದ ರಿಯಾಝ್ ಅವರು, ಇದಕ್ಕೆ ಬೇಕಾಗಿ ಕಾರ್ಯಕರ್ತರೆಲ್ಲ ಯಾವುದೇ ಅಡೆ ತಡೆಗೆ ಹೆದರೆದೆ ಸಾಮಾಜಿಕ, ರಾಜಕೀಯ ರಂಗದಲ್ಲಿ ಮುನ್ನೆಲೆಗೆ ಬಂದು ಹಸಿವು ಮುಕ್ತ, ಭಯ ಮುಕ್ತ ದೇಶ ಕಟ್ಟಲು ನೇರವಾಗಬೇಕೆಂದು ತನ್ನ ಬಾಷಣದಲ್ಲಿ ಕರೆ ನೀಡಿದರು.

ಅತಿಥಿ ಭಾಷಣ ಮಾಡಿದ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು, ಎಸ್.ಡಿ.ಪಿ.ಐ ತಳ ಮಟ್ಟದ ಜನರನ್ನು ರಾಜಕೀಯಕ್ಕೆ ತಂದು ಸಾಮಾಜಿಕ ಗುಣ ಬೆಳೆಸಿ ಕೊಡುವ ಕ್ಯಾಡರ್ ಬೇಸ್ ಪಕ್ಷವೇ ಹೊರತು ಇತರ ಪಕ್ಷಗಳ ಹಾಗೆ ಚುನಾವಣೆ ಸಂದರ್ಭದಲ್ಲಿ ನಾಯಿ ಕೊಡೆಗಳಂತೆ ಮಾತ್ರ ಬರುವ ಪಕ್ಷವಲ್ಲ. ದೇಶದಲ್ಲಿ ನಡೆಯುವ ಶೋಷಿತ, ಮರ್ದಿತ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಲು ಹೋರಾಟ ರಂಗದಲ್ಲಿ ಎಲ್ಲರೂ ಕಟಿ ಬದ್ಧರಾಗಿರಬೇಕು ಎಂದು ಕರೆ ನೀಡಿದರು.

ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಸಂಘ ಪರಿವಾರದ ವಿರುದ್ಧ ಒಂದು ಕಡೆ ಕ್ರಮ ಕೈಗೊಳ್ಳಬೇಕೆಂದು ಆದೇಶಿಸುವ ಕಾಂಗ್ರೆಸ್ ಅದೇ ಸಂಘ ಪರಿವಾರದ ಮನಸ್ಥಿತಿಯುಳ್ಳವರಿಂದ ಶಾಸಕರಿಗೆ ಮೋಟಿವೇಶನ್ ಕ್ಲಾಸ್ ಕೊಡಲು ಸಿದ್ಧವಾಗಿದೆ. ಕಾಂಗ್ರೆಸ್‌ನಿಂದ ಶೇಕಡ 88 ಮತ ಹಾಕಿದ ಮುಸ್ಲಿಮರಿಗೆ ನ್ಯಾಯ ಸಿಗಬಹುದೆಂಬ ಆಶ್ವಾಸನೆ ಬಿಟ್ಟು ಬಿಡಿ. ಮುಂದೆ ಬರುವ ಜಿಲ್ಲಾ ಪಂಚಾಯತ್, ಕಾರ್ಪೊರೇಷನ್ ಚುನಾವಣಾಗೆ ಎಲ್ಲರೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗೋಣ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷತೆಯನ್ನು ದಕ್ಷಿಣ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಕ್ಬರ್ ರಾಝಾ ವಹಿಸಿದ್ದರು.
ಸಿದ್ದಿಕ್ ಬೆಂಗರೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್ ವಂದಿಸಿ, ಬಶೀರ್ ಬಜಾಲ್ ನಿರೂಪಿಸಿದರು.