ಭೀಕರ ರಸ್ತೆ ಅಪಘಾತ: ಕಾಲು ಕಳೆದುಕೊಂಡ ಖ್ಯಾತ ನಟ ಸೂರಜ್

Prasthutha|

ಬೆಂಗಳೂರು: ಕನ್ನಡ ಸಿನಿಮಾದ ಖ್ಯಾತ ನಟ ಸೂರಜ್ ಊಟಿಗೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಶನಿವಾರ (ಜೂನ್​ 24) ಸಂಜೆ ನಾಲ್ಕು ಗಂಟೆ ಸುಮಾರಿಗೆ ಅವರು ತೆರಳುತ್ತಿದ್ದ ಕಾರಿಗೆ ನಂಜನಗೂಡಿನ ಬಳಿ ಲಾರಿ ಡಿಕ್ಕಿಯಾಗಿದೆ. ಮೂಲಗಳ ಪ್ರಕಾರ ಅವರ ಕಾಲಿಗೆ ತೀವ್ರವಾಗಿ ಪೆಟ್ಟಾಗಿದೆ. ಪರಿಣಾಮವಾಗಿ ಕಾಲು ಕತ್ತರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೂರಜ್​ ಅವರು ಡಾ. ರಾಜ್​ಕುಮಾರ್​ ಅವರ ಪತ್ನಿ ಪಾರ್ವತಮ್ಮ ರಾಜ್​ಕುಮಾರ್​ ಅವರ ಸಹೋದರನ ಪುತ್ರನಾಗಿದ್ದಾರೆ.