SDTU ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ

Prasthutha|

ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (SDTU) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ ಶುಕ್ರವಾರದಂದು ಬೆಳ್ತಂಗಡಿ ಜಂಇಯ್ಯತುಲ್ ಫಲಾಹ್ ಸಭಾಭವನದಲ್ಲಿ ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸ್ವಾಲಿಹ್ ಮದ್ದಡ್ಕ ನೇತೃತ್ವದಲ್ಲಿ ನಡೆಯಿತು.

- Advertisement -
  ಮುಖ್ಯ ಅತಿಥಿಗಳಾಗಿ ಎಸ್‌ಡಿಟಿಯು ರಾಜ್ಯ ಕೋಶಾಧಿಕಾರಿ ಖಾದರ್ ಫರಂಗಿಪೇಟೆ, ದ.ಕ ಜಿಲ್ಲಾ ಉಪಾಧ್ಯಕ್ಷರಾದ ಸಿದ್ದೀಕ್ ಕಣ್ಣಂಗಾರ್, ಜಿಲ್ಲಾ ಕಾರ್ಯದರ್ಶಿ ಶಮೀಮ್ ಯೂಸುಫ್ ಆಗಮಿಸಿದ್ದರು.

  ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ಇಕ್ಬಾಲ್ ಸಾಲ್ಮರ, ಕಾರ್ಯದರ್ಶಿ ರಿಯಾಝ್ ಪಣಕಜೆ, ತಾಲೂಕು ವ್ಯಾಪ್ತಿಯ ವಾಹನ ಚಾಲಕರು 

ಮತ್ತು ಮಾಲಕರು ಉಪಸ್ಥಿತರಿದ್ದರು.