ಸರಕಾರದೊಂದಿಗಿನ ಶಾಂತಿ ಒಪ್ಪಂದ: ಅಮಿತ್ ಶಾ ಮೇಲೆ ನಂಬಿಕೆಯಿಲ್ಲ ಎಂದ ಉಲ್ಫಾ ಸ್ವತಂತ್ರ ಬಣ

Prasthutha|

ನವದೆಹಲಿ: ಕೇಂದ್ರ ಹಾಗೂ ಅಸ್ಸಾಂ ಸರ್ಕಾರಗಳೊಂದಿಗೆ ಅಸ್ಸಾನ ಉಗ್ರಗಾಮಿ ಸಂಘಟನೆಯಾದ ಯುಎಲ್‌ಎಫ್‌ಎ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಆದರೆ ಇದರ ಬಣವಾದ ಪರೇಶ್‌ ಬರುವಾ ನೇತೃತ್ವದ ಉಲ್ಫಾ (ಸ್ವತಂತ್ರ) ಬಣ ಮಾತುಕತೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

- Advertisement -

ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಯಶಸ್ಸು ಈಶಾನ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತಂದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಅಸ್ಸಾಂನ ಅತ್ಯಂತ ಹಳೆಯ ದಂಗೆಕೋರ ಗುಂಪು ಯುಎಲ್‌ಎಫ್‌ಎ ಹಿಂಸಾಚಾರದ ಹಾದಿಯನ್ನು ತ್ಯಜಿಸಲು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ. ಆದರೆ ಪರೇಶ್‌ ಬರುವಾ ನೇತೃತ್ವದ ಉಲ್ಫಾ (ಸ್ವತಂತ್ರ) ಬಣ, ಸರಕಾರದೊಂದಿಗುನ ಮಾತುಕತೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಗೃಹಸಚಿವರ ಮಾತಲ್ಲಿ ನಂಬಿಕೆಯಿಲ್ಲ ಎಂದಿದೆ.

Join Whatsapp