ತಮ್ಮ ಪಠ್ಯ ಕೈಬಿಡುವಂತೆ ಪತ್ರ ಬರೆದ ಪಾರ್ವತೀಶ ಬಿಳಿದಾಳೆ, ರೂಪಾ ಹಾಸನ

Prasthutha|

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರುತ್ತಿದ್ದು, ಹಿರಿಯ ಸಾಹಿತಿಗಳಾದ ಪಾರ್ವತೀಶ ಬಿಳಿದಾಳೆ ಹಾಗೂ ರೂಪಾ ಹಾಸನ ಕೂಡ ತಮ್ಮ ಪಠ್ಯವನ್ನು ಕೈಬಿಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಪಾರ್ವತೀಶ ಬಿಳಿದಾಳೆ ಶಿಕ್ಷಣ ಸಚಿವರಿಗೆ ಹಾಗೂ ಇಲಾಖೆಗೆ ಬರೆದ ಪತ್ರದಲ್ಲಿ, ಕೋಮುವಾದಿ ರೋಹಿತ್ ಚಕ್ರತೀರ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, 8ನೇ ತರಗತಿಯ ಪಠ್ಯದಲ್ಲಿ ಇದುವರೆಗೆ ಬಳಸಲಾಗುತ್ತಿದ್ದ ನನ್ನ ‘ಬಿಳಿದಾಳೆಯ ಆನೆಗಳು ‘ ಬರಹವನ್ನು ಮುಂದಕ್ಕೆ ಬಳಸದಂತೆ ಮನವಿ ಮಾಡಿದ್ದಾರೆ.

ಸಾಹಿತಿ ರೂಪಾ ಹಾಸನರವರು 9 ನೆಯ ತರಗತಿಯ ಪಠ್ಯದಿಂದ ತನ್ನ “ಅಮ್ಮನಾಗುವುದೆಂದರೆ” ಕವಿತೆಯನ್ನು ಕೈಬಿಡಬೇಕು ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

- Advertisement -

ಶಾಲಾ ಪಠ್ಯಪುಸ್ತಕಗಳು ಆಳುವ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರುಪರಿಷ್ಕರಣೆಗೊಂಡಿರುವುದು ಖೇದನೀಯ. ಅದನ್ನು ಈಗಾಗಲೇ ಕೆಲವು ಹಿರಿಯ ಗೌರವಾನ್ವಿತ ಸಾಹಿತಿಗಳು ಖಂಡಿಸಿ, ಪಠ್ಯದಲ್ಲಿ ತಮ್ಮ ಬರಹವನ್ನು ಸೇರ್ಪಡೆಗೊಳಿಸಲು ಹಿಂದಿನ ಸಮಿತಿಗೆ ಕೊಟ್ಟ ಅನುಮತಿಯನ್ನು ಹಿಂಪಡೆದಿದ್ದಾರೆ. ಈ ಮೂಲಕ ತಮ್ಮ ನೈತಿಕ ಹಾಗೂ ಸಾತ್ವಿಕ ಪ್ರತಿರೋಧ ತೋರಿದ್ದಾರೆ. ಆದರೆ ಆದ ತಪ್ಪನ್ನು ಸರಿಪಡಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕಾದ ಸರ್ಕಾರ, ಈ ಕುರಿತು ನಿರ್ಲಕ್ಷ್ಯ ವಹಿಸಿರುವುದು ಹಾಗೂ ಸರ್ಕಾರದ ಜನಪ್ರತಿನಿಧಿಗಳಿಂದಲೇ ಅಂತಹ ಘನತೆಯುತ ಸಾಹಿತಿಗಳನ್ನು ಇನ್ನಷ್ಟು ಅವಮಾನಿಸುವ ಸಂಗತಿಗಳು ನಡೆಯುತ್ತಿರುವುದು ಖಂಡನೀಯ ಎಂದು ಪತ್ರದಲ್ಲಿ ರೂಪಾ ಹಾಸನ ನಮೂದಿಸಿದ್ದಾರೆ.

Join Whatsapp