ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪೂರಕ ದಾಖಲೆ ಸಲ್ಲಿಸಲು ಸೂಚನೆ

Prasthutha|

ಮಂಗಳೂರು: ಕರ್ನಾಟಕ ರಾಜ್ಯಕ್ಕೆ ಸೇರಿದ ನೋಂದಾಯಿತ, ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಸಿ ಅನ್ವಯ ಸ್ವೀಕರಿಸಲಾದ ರಾಜಕೀಯ ವಂತಿಕೆಗಳು 24ಎ(ಪ್ರತಿ ವರ್ಷ ಸೆಪ್ಟೆಂಬರ್ 30 ರೊಳಗಾಗಿ) ಹಾಗೂ ಅಡಿಟ್ ವರದಿ (ಪ್ರತಿ ವರ್ಷ ಅಕ್ಟೋಬರ್ ತಿಂಗಳೊಳಗೆ) ಮತ್ತು ಚುನಾವಣಾ ವೆಚ್ಚದ ವಿವರಗಳನ್ನು (ವಿಧಾನ ಸಭಾ ಚುನಾವಣಾ ನಡೆದ 75 ದಿನಗಳೊಳಗಾಗಿ ಹಾಗೂ ಲೋಕಸಭಾ ಚುನಾವಣಾ ನಡೆದ 90 ದಿನಗಳೊಳಗಾಗಿ) 2017-18, 2018-19, 2019-2020 ಹಣಕಾಸು ವರ್ಷಗಳಲ್ಲಿ ನಿಗದಿತ ಅವಧಿಯೊಳಗಾಗಿ ಸಲ್ಲಿಸದೆ ಇರುವ ಒಟ್ಟು 85 ನೊಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ವಿವರಗಳನ್ನು Ceo Karnataka Gov.In ರಲ್ಲಿ ನೋಡಬಹುದಾಗಿದೆ.

- Advertisement -

ಈ 85 ನೊಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಪೂರಕ ದಾಖಲೆಗಳ ಒಂದು ಪ್ರತಿಯನ್ನು ಮಂಗಳೂರು ನಗರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಇನ್ನೊಂದು ಪತ್ರಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ವಿರ್ವಾಚನ ವಿಲಯ, ಶೇಷಾದ್ರಿ ರಸ್ತೆ ಬೆಂಗಳೂರು- 560001 ಇವರಿಗೆ 2022ರ ಜೂನ್.6 ರೊಳಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp