ಬ್ರಿಟಿಷರ ಕಾಲದಲ್ಲೂ ಕೃಷಿ ಕಾನೂನು ಹಿಂಪಡೆಯಲಾಗಿತ್ತು : ಗುಲಾಂ ನಬಿ ಆಝಾದ್

Prasthutha|

ನವದೆಹಲಿ : ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಝಾದ್ ಒತ್ತಾಯಿಸಿದ್ದಾರೆ. ದೆಹಲಿ ಗಡಿ ಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಉಲ್ಲೇಖಿಸಿ ಅವರು ಮಾತನಾಡುತ್ತಿದ್ದರು.

- Advertisement -

“ತಮ್ಮ ಆಡಳಿತದಲ್ಲಿ ಬ್ರಿಟಿಷರು ಕೂಡ ಒಂದು ಬಾರಿ ಕೃಷಿ ಕಾನೂನನ್ನು ಹಿಂಪಡೆದಿದ್ದರು” ಎಂದು ಗುಲಾಂ ನಬಿ ಆಝಾರ್ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ 15 ಗಂಟೆಗಳ ಅವಧಿಗೆ ರೈತರ ಪ್ರತಿಭಟನೆ ಬಗ್ಗೆ ಮಾತನಾಡಲು ಅವಕಾಶ ನೀಡಲಾಗಿದೆ. ಎರಡು ದಿನಗಳ ಪ್ರಶ್ನಾವಧಿಯನ್ನು ಅಮಾನತುಗೊಳಿಸಲಾಗಿದೆ.

- Advertisement -

ಜ.26ರಿಂದ ಕಾಣೆಯಾಗಿರುವವರ ಬಗ್ಗೆ ಪರಿಶೀಲಿಸಲು ಸಮಿತಿ ರಚಿಸುವಂತೆಯೂ ಆಝಾದ್ ಒತ್ತಾಯಿಸಿದ್ದಾರೆ.



Join Whatsapp