ಅನೇಕ ಸರ್ವಾಧಿಕಾರಿಗಳ ಹೆಸರು ‘M’ನಿಂದ ಏಕೆ ಆರಂಭವಾಗುತ್ತದೆ? : ರಾಹುಲ್ ಗಾಂಧಿ ಪ್ರಶ್ನೆ

Prasthutha|

ನವದೆಹಲಿ : ಅನೇಕ ಸರ್ವಾಧಿಕಾರಿಗಳ ಹೆಸರುಗಳು ‘ಎಂ’ ಅಕ್ಷರದಿಂದ ಪ್ರಾರಂಭವಾಗಲು ಕಾರಣವೇನು? ಎಂದು ಕುತೂಹಲಕಾರಿ ಪ್ರಶ್ನೆಯೊಂದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟುಹಾಕಿದ್ದಾರೆ.

- Advertisement -

ಅನೇಕ ಸರ್ವಾಧಿಕಾರಿಗಳು ‘ಎಂ’ನಿಂದ ಆರಂಭವಾಗುವ ಹೆಸರುಗಳನ್ನು ಏಕೆ ಹೊಂದಿದ್ದಾರೆ? ಮಾರ್ಕಸ್, ಮುಸ್ಸೊಲಿನಿ, ಮಿಲೊಸೆವಿಕ್, ಮುಬಾರಕ್, ಮೊಬುಟು, ಮುಷರ್ರಫ್, ಮೈಕಾಂಬೆರೊ ಎಂದು ರಾಹುಲ್ ಗಾಂಧಿ ಹಲವು ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ಈ ಟ್ವೀಟ್ ಹಿಂದಿನ ಕಾರಣ ತಿಳಿದು ಬಂದಿಲ್ಲ. ಆದರೆ, ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಸರ್ವಾಧಿಕಾರಿ ಎಂದು ಆರೋಪಿಸುವ ಯತ್ನ ಎಂದು ವಿಶ್ಲೇಷಿಸಲಾಗಿದೆ.  

Join Whatsapp