ಸಂಸದರಿಗೆ ಕೊರೋನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ

Prasthutha|

ನವದೆಹಲಿ : ಲೋಕಸಭೆಯ ಮುಂದಿನ ಮಳೆಗಾಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಂಸದರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಮಳೆಗಾಲದ ಮಾನ್ಸೂನ್ ಅಧಿವೇಶನ ಮುಂದಿನ ಸೆಪ್ಟಂಬರ್ 14 ರಿಂದ ಪ್ರಾರಂಭಗೊಳ್ಳಲಿದೆ. ಕೇಂದ್ರ ಆರೋಗ್ಯ ಇಲಾಖೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿರ್ದೇಶನದ ಮೇರೆಗೆ ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯ ಕೊರೋನಾ ಹಿನ್ನೆಲೆಯಲ್ಲಿ ಮಾರ್ಗದರ್ಶಿ ಸೂತ್ರಗಳ ಸುತ್ತೋಲೆಯನ್ನು ಹೊರಡಿಸಿದೆ.
ಅಧಿವೇಶನ ಪ್ರಾರಂಭವಾಗುವ 72 ಗಂಟೆಗಳ ಮೊದಲಿನ ವರದಿ ಕೈಯ್ಯಲ್ಲಿರಬೇಕಾಗಿದ್ದು, ತಪ್ಪಿದ್ದಲ್ಲಿ ಸಂಸತ್ ಭವನದಲ್ಲಿ ಕೊರೋನಾ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಸುತ್ತೋಲೆ ತಿಳಿಸಿದೆ. ಇದೇ ಶನಿವಾರದಿಂದ ಲೋಕಸಭಾ ಸಚಿವಾಲಯ ಕೊರೋನ ಪರೀಕ್ಷಾ ಶಿಬಿರ ಏರ್ಪಡಿಸಿದ್ದು, ಅಧಿವೇಶನದ ಸಮಯದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳನ್ನು ಸೋಂಕಿನ ಪರೀಕ್ಷೆಗೊಳಪಡಿಸಲಾಗುತ್ತದೆ.
ಸಂಸತ್ ಸದಸ್ಯರ ಕುಟುಂಬ ವರ್ಗ ಅಥವಾ ಸಿಬ್ಬಂದಿ ಯಾರಾದರೂ ಪಾಸಿಟಿವ್ ಆಗಿದ್ದರೆ, ಸದಸ್ಯರು ಆರೋಗ್ಯ ಮಾರ್ಗಸೂಚಿಗಳ ಪ್ರಕಾರ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಬೇಕಾಗಿದೆ. ಅಧಿವೇಶಕ್ಕೂ ಮುಂಚಿತವಾಗಿ ಸಂಸತ್ ಸದಸ್ಯರ ಕುಟುಂಬ ಹಾಗೂ ಸಿಬ್ಬಂದಿ ವರ್ಗಕ್ಕೂ ಕೊರೋನಾ ಪರೀಕ್ಷೆ ಕಡ್ಡಾಯವಾಗಿದೆ.

Join Whatsapp