ಕೊರೋನ ಸಂಕಷ್ಟ | ಮುಂದಿನ ವರ್ಷ 47 ದಶಲಕ್ಷ ಮಹಿಳೆಯರಲ್ಲಿ ಹೆಚ್ಚಲಿದೆ ಬಡತನ | ವಿಶ್ವಸಂಸ್ಥೆ

Prasthutha|

ನವದೆಹಲಿ : ಕೋವಿಡ್ 19 ಕಾರಣದಿಂದಾಗಿ ಮುಂದಿನ ವರ್ಷ ದಕ್ಷಿಣ ಏಷ್ಯಾದಲ್ಲಿ ಮಹಿಳೆಯರ ಬಡತನ ದರ ದೊಡ್ಡ ಮಟ್ಟದಲ್ಲಿ ಏರಿಕೆಯಾಗಲಿದೆ ಎಂದು ವಿಶ್ವಸಂಸ್ಥೆಯ ಹೊಸ ಅಂಕಿ ಅಂಶಗಳಿಂದ ತಿಳಿದುಬಂದಿದೆ. ಅಲ್ಲದೆ, ಮುಂದಿನ ಒಂದು ದಶಕದಲ್ಲಿ 25-34ರ ವಯಸ್ಸಿನ ಮಹಿಳೆಯರು ಹೆಚ್ಚು ಬಡವರಾಗಲಿದ್ದಾರೆ ಎಂದು ವಿಶ್ವಸಂಸ್ಥೆಯ ಮಹಿಳಾ ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಅಂಕಿಅಂಶಗಳು ತಿಳಿಸುತ್ತವೆ.

2021ರಲ್ಲಿ 47 ದಶಲಕ್ಷ ಮಂದಿ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಮತ್ತೆ ತೀವ್ರ ಬಡತನಕ್ಕೆ ಒಳಗಾಗಲಿದ್ದಾರೆ. ಈ ಮಹಿಳೆಯರನ್ನು ಬಡತನ ರೇಖೆಗಿಂತ ಮೇಲೆತ್ತಲು ದಶಕಗಳಿಂದ ನಡೆಯುತ್ತಿರುವ ಪ್ರಯತ್ನವನ್ನು ತಲೆಕೆಳಗಾಗಿಸಿ, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಬಡತನದ ಪ್ರಮಾಣ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.

- Advertisement -

ದಕ್ಷಿಣ ಏಷ್ಯಾ, ಕೇಂದ್ರ ಏಷ್ಯಾ ಮತ್ತು ಉಪ-ಸಹರಾನ್ ಆಫ್ರಿಕಾದಲ್ಲಿ ಜಗತ್ತಿನ ಶೇ.87ರಷ್ಟು ಬಡ ಮಹಿಳೆಯರಿದ್ದಾರೆ. ಇದು ಇನ್ನಷ್ಟು ಹೆಚ್ಚಲಿದೆ. ಮುಂದಿನ ಒಂದು ದಕ್ಷಿಣ ಏಷ್ಯಾದಲ್ಲಿ ವರ್ಷ ಶೇ.10ರಷ್ಟು ಮಹಿಳಾ ಬಡತನ ದರ ಇರಲಿದೆ ಎಂದು ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಈಗ ಪರಿಶೀಲಿತ ಅಂಕಿಅಂಶಗಳ ಪ್ರಕಾರ, ಅದು ಶೇ.13ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

- Advertisement -