ಸೈನಿಕ ಕಲ್ಯಾಣ, ಪುನರ್ ವಸತಿ ಮಂಡಳಿ ಸ್ಥಾಪನೆಗೆ ಒತ್ತಾಯಿಸಿ ಅರೆ ಸೇನಾ ಪಡೆ ಯೋಧರಿಂದ ಪ್ರತಿಭಟನೆ

Prasthutha|

ಬೆಂಗಳೂರು: ಸೇವೆಯಿಂದ ನಿವೃತ್ತರಾದ ರಾಜ್ಯದ ಮಾಜಿ ಯೋಧರು ಹಾಗೂ ಹುತಾತ್ಮ ಯೋಧರ ಕುಟುಂಬಗಳ ಕ್ಷೇಮಾಭಿವೃದ್ಧಿಗಾಗಿ ರಾಜ್ಯದ ರಾಜಧಾನಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಅರ್ಧ ಸೈನಿಕ ಕಲ್ಯಾಣ ಹಾಗೂ ಪುನರ್ ವಸತಿ ಮಂಡಳಿಯನ್ನು ಸ್ಥಾಪಿಸಿ ಅರೆ ಸೇನಾಪಡೆಗಳ ಯೋಧರನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಸಾವಿರಾರು ಅರೆ ಸೇನಾ ಪಡೆಗಳ ಯೋಧರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.

- Advertisement -

ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ನಿವೃತ್ತರಾದ ಅರೆಸೇನಾ ಪಡೆಗಳ ಯೋಧರನ್ನು ಅರ್ಹತೆ ಆಧಾರದ ಮೇಲೆ ನೇಮಕಮಾಡಿಕೊಳ್ಳಬೇಕು. ಹುತಾತ್ಮ ಯೋಧರ ಕುಟುಂಬದವರಿಗೆ ಸರ್ಕಾರಿ ಹುದ್ದೆಗಳಲ್ಲಿ  ನೇಮಕಾತಿ ಮಾಡಿಕೊಳ್ಳಲು ಸೂಕ್ತ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು.

2004ರ ನಂತರ ನೇಮಕವಾದ ನಮ್ಮ ಯೋಧರಿಗೆ ಹಳೇ ಪಿಂಚಣಿಯನ್ನು ಪುನರ್ ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಬಿಎಸ್’ಎಫ್, ಸಿಆರ್’ಫಿಎಫ್, ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಪಡೆ, ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ಯೋಧರು ಸೇವೆಯಿಂದ ನಿವೃತ್ತರಾದ  ಹಾಗೂ ಹುತಾತ್ಮ ಕುಟುಂಬಗಳಿಗೆ ಕೃಷಿ ಉದ್ದೇಶಕ್ಕಾಗಿ ಭೂಮಿ ಮತ್ತು ಮನೆ ಮಂಜೂರು ಮಾಡಲು ಕನಿಷ್ಠ 10 ಲಕ್ಷ ರೂಪಾಯಿಗಳ ಸಹಾಯಧನ ನೀಡಲು ಸರ್ಕಾರಿ ಸಹಾಯ ಧನ  ನೀಡಲು ಸೂಕ್ತ ಆದೇಶ ನೀಡಬೇಕೆಂದು ರಾಜ್ಯಾಧ್ಯಕ್ಷ ಹನುಮಂತ ರಾಜು, ಖಚಾಂಚಿ  ಮಹೇಂದ್ರ, ಯೋಧ ಶ್ರೀ ನಿವಾಸ್ ಒತ್ತಾಯಿಸಿದರು.

Join Whatsapp