ಗನ್ ಪಾಯಿಂಟ್’ನಲ್ಲಿ ಮಹಿಳೆಯ ಸರ ಕಸಿದ ದರೋಡೆಕೋರ: ವೀಡಿಯೋ ವೈರಲ್

Prasthutha|

ಗಾಜಿಯಾಬಾದ್: ಹಾಡಹಗಲೇ ಗನ್ ಪಾಯಿಂಟ್’ನಲ್ಲಿ ದರೋಡೆಕೋರನೋರ್ವ, ಮಹಿಳೆಯಿಂದ ಸರ ಮತ್ತು ಹದಿಹರೆಯದ ಯುವಕನಿಂದ ಮೊಬೈಲ್ ಫೋನ್ ಕಸಿದುಕೊಂಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಈ ಘಟನೆ ಗಾಜಿಯಾಬಾದ್’ನ ಲೋನಿ ಪ್ರದೇಶದಲ್ಲಿ ನಡೆದಿದ್ದು, ಸರ ಕಸಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ಮಹಿಳೆಯ ಕಡೆಗೆ ಗನ್ ತೋರಿಸಿ ಆಕೆಯನ್ನು ಬೆದರಿಸಿ  ಸರವನ್ನು ಕಸಿದುಕೊಂಡು ನಂತರ ಸ್ಕೂಟಿಯಲ್ಲಿ ಕುಳಿತಿದ್ದ ಹುಡುಗನ ಮೊಬೈಲ್ ಅನ್ನು ಕಸಿದುಕೊಂಡು ಹೋಗಿರುವುದು ವೀಡಿಯೋದಲ್ಲಿ ಕಾಣಬಹುದು.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

ಆರೋಪಿಯನ್ನು ಗುರುತಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಲೋನಿ ಡಿಎಸ್ಪಿ ರಜನೀಶ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ.

Join Whatsapp