ನೀತಿ ಆಯೋಗದ ಸಿಇಒ ಆಗಿ ಪರಮೇಶ್ವರನ್ ಅಯ್ಯರ್ ನೇಮಕ

Prasthutha|

ನವದೆಹಲಿ: ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರನ್ನು ನೀತಿ ಆಯೋಗದ ನೂತನ ಸಿಇಒ ಆಗಿ ಶುಕ್ರವಾರ ನೇಮಿಸಲಾಗಿದೆ.

- Advertisement -

ಅವರು ಕಳೆದ ವರ್ಷ ಜುಲೈನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

1981 ರ ಬ್ಯಾಚ್’ನ ಐಎಎಸ್ ಅಧಿಕಾರಿಯಾಗಿರುವ ಅಯ್ಯರ್ ಅವರು ಖ್ಯಾತ ನೈರ್ಮಲ್ಯ ತಜ್ಞರಾಗಿದ್ದು, ಅಮಿತಾಭ್ ಕಾಂತ್ ಅವರು ಜೂನ್ 30 ರಂದು ನಿವೃತ್ತರಾದ ಬಳಿಕ ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ನೀತಿ ಆಯೋಗದ ಸಿಇಒ ಆಗಿ ನೇಮಕಗೊಂಡಿದ್ದಾರೆ.

- Advertisement -

ಪರಮೇಶ್ವರನ್ ಅಯ್ಯರ್ ಅವರು 2009 ರಲ್ಲಿ ಭಾರತೀಯ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿಯೂ ಸೇವೆ ಸಲ್ಲಿಸಿದ್ದರು.

Join Whatsapp