ವರದಕ್ಷಿಣೆ ಕಿರುಕುಳ ಆರೋಪ: ವಿವಾಹಿತೆ ನೇಣುಬಿಗಿದು ಆತ್ಮಹತ್ಯೆ

Prasthutha|

ಮಂಡ್ಯ: ವಿವಾಹಿತೆಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಾರಿಗನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

- Advertisement -


ಸಹನ(35) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ ಎಂದು ಗುರುತಿಸಲಾಗಿದೆ.

ವರದಕ್ಷಿಣೆ ಕಿರುಕುಳದಿಂದ ಸಹನ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆಕೆಯ ಪೋಷಕರು ಆರೋಪಿಸಿದ್ದು, ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸಹನ ಗಂಡನ ಮನೆಯ ಮುಂದೆ ನಿಂತಿದ್ದ ಕಾರನ್ನು ಪುಡಿಮಾಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -


ಪೋಷಕರು ನೀಡಿದ ದೂರನ್ನು ದಾಖಲಿಸಿಕೊಂಡಿರುವ ಕಿಕ್ಕೇರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Join Whatsapp