ಉಡುಪಿ: ಎಸ್ ಡಿಪಿಐ ಕಾರ್ಯಕರ್ತ ನಿಧನ

Prasthutha|

ಉಚ್ಚಿಲ: ಎಸ್ ಡಿಪಿಐ ಕಾರ್ಯಕರ್ತ ಅಬ್ಬಾಸ್ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು.
ಉಚ್ಚಿಲದ ಭಾಸ್ಕರ್ ನಗರದ ನಿವಾಸಿಯಾಗಿರುವ ಅಬ್ಬಾಸ್ ಅವರಿಗೆ ಕಳೆದ 2 ವರ್ಷಗಳ ಹಿಂದೆ ಕೋವಿಡ್ ತಗುಲಿದ ಬಳಿಕ ಕೋಮಾದಲ್ಲಿದ್ದರು. ಆದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -


ಮೃತರು ತಾಯಿ, ಪತ್ನಿ, ಐವರು ಸಹೋದರರು, ನಾಲ್ವರು ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಶುಕ್ರವಾರ ಸಂಜೆ ಎರ್ಮಾಳ್ ಜಾಮಿಯಾ ಮಸೀದಿಯ ಕಬರಸ್ತಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಬ್ಬಾಸ್ ಅವರ ನಿಧನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.


ಎಸ್ ಡಿಪಿಐ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ, ಎಲ್ಲರ ಪ್ರೀತಿ ಪಾತ್ರರಾಗಿದ್ದ ಅಬ್ಬಾಸ್ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಪಾರತ್ರಿಕ ಜೀವನ ಸುಖಕರವಾಗಿರಲಿ ಹಾಗೂ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅಲ್ಲಾಹನು ಕುಟುಂಬಕ್ಕೆ ನೀಡಲಿ ಎಂದು ಪಕ್ಷ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp