ಜೈಲಿನಿಂದ ಪರಾರಿಯಾದ ಫೆಲೆಸ್ತೀನ್ ಕೈದಿಗಳ ಕುಟುಂಬವನ್ನು ಗುರಿಯಾಗಿಸುತ್ತಿರುವ ಇಸ್ರೇಲ್ ಪಡೆ !

Prasthutha|

ಜೆನಿನ್, ಪಶ್ಚಿಮ ದಂಡೆ: ಇಸ್ರೇಲ್ ಪಡೆಗಳ ವಶದಲ್ಲಿದ್ದ ಫೆಲೆಸ್ತೀನ್ ಕೈದಿಗಳು ಉನ್ನತ ಭದ್ರತೆಯ ಸೆರೆಮನೆಯಿಂದ ಪರಾರಿಯಾದ ಘಟನೆಯನ್ನು ಮುಂದಿಟ್ಟುಕೊಂಡು ಕೈದಿಗಳ ಕುಟುಂಬವನ್ನು ಗುರಿಯಾಗಿಸಿ ಬಂಧಿಸಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪರಾರಿಯಾದ ಕೈದಿಗಳ ಕುಟುಂಬದ ಕನಿಷ್ಠ 7 ಸದಸ್ಯರನ್ನು ಇಸ್ರೇಲ್ ಸೈನಿಕರು ಪಶ್ಚಿಮ ದಂಡೆಯಿಂದ ಬಂಧಿಸಿದ್ದಾರೆಂದು ಫೆಲೆಸ್ತೀನ್ ಪರ ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿದೆ. ಮಾತ್ರವಲ್ಲದೆ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ಮತ್ತು ಬಂಧನ ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.

- Advertisement -

ಪಶ್ಚಿಮ ದಂಡೆಯ ಶಿಬಿರದಲ್ಲಿ ಇತ್ತೀಚೆಗೆ ಜೈಲಿನಿಂದ ಪರಾರಿಯಾದ ಝಕರಿಯ ಝುಬೈದಿ ನಿವಾಸಕ್ಕೆ ಪತ್ರಕರ್ತರು ಸಂದರ್ಶಕ್ಕಾಗಿ ಭೇಟಿ ನೀಡಿದಾಗ ಅವರ ಸಹೋದರ ಯಹ್ಯಾ ಅವರನ್ನು ಅನುಮಾನಾಸ್ಪದವಾಗಿ ನೋಡಿದರು ಮತ್ತು ಸಂದರ್ಶನಕ್ಕೆ ಮುಂದಾದ ಪತ್ರಕರ್ತರ ಮೇಲೆ ಹರಿಹಾಯ್ದರು.

ಸೋಮವಾರ ಮುಂಜಾನೆ ಇಸ್ರೇಲ್ ನ ಗಿಲ್ಬೊವಾ ಜೈಲಿನಿಂದ ಪರಾರಿಯಾದ 6 ಫೆಲೆಸ್ತೀನ್ ಕೈದಿಗಳ ಪೈಕಿ ಝಕರಿಯ ಝುಬೈದಿಯೂ ಒಬ್ಬರು. ನಮ್ಮ ಕುಟುಂಬದ ಮೇಲೆ ಯಾವುದೇ ಕ್ಷಣದಲ್ಲಿಯೂ ಇಸ್ರೇಲ್ ಪಡೆ ದಾಳಿ ನಡೆಸಬಹುದೆಂದು ಝಕರಿಯ ಅವರ ಚಿಕ್ಕಪ್ಪ ಜಮಾಲ್ ಝುಬೈದಿ ತಿಳಿಸಿದ್ದಾರೆ.

- Advertisement -