ಟಿ20 ವಿಶ್ವಕಪ್‌ | ಭಾರತವನ್ನು ಮಣಿಸಿದರೆ ಝಿಂಬಾಬ್ವೆ ದೇಶದವರಿಗೆ ಮದುವೆ ಆಫರ್ ನೀಡಿದ ಪಾಕ್‌ ನಟಿ

Prasthutha|

ಟಿ20 ವಿಶ್ವಕಪ್‌ ಟೂರ್ನಿಯು ರೋಚಕ ಘಟ್ಟ ತಲುಪಿದೆ. ಗ್ರೂಪ್‌ 1ರಲ್ಲಿ ನ್ಯೂಜಿಲೆಂಡ್‌ ಮೊದಲ ತಂಡವಾಗಿ ಸೆಮಿಫೈನಲ್‌ ಪ್ರವೇಶಿಸಿದೆ. ಸೂಪರ್‌-12ರಲ್ಲಿ ಇನ್ನು ಕೇವಲ 4 ಪಂದ್ಯಗಳು ಬಾಕಿ ಉಳಿದಿದ್ದು, 3 ಸ್ಥಾನಕ್ಕಾಗಿ 6 ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

- Advertisement -

ಗ್ರೂಪ್‌ 2ರ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಟೀಮ್‌ ಇಂಡಿಯಾ ಅಗ್ರ ಸ್ಥಾನದಲ್ಲಿದೆ. ರೋಹಿತ್‌ ಬಳಗದ  ಸೆಮಿ ಫೈನಲ್‌ ಹಾದಿಯನ್ನು ಸುಗಮವಾಗಿದೆ. ಮತ್ತೊಂದೆಡೆ ಆಡಿರುವ 4 ಪಂದ್ಯಗಳಲ್ಲಿ ತಲಾ 2 ಗೆಲುವು ಮತ್ತು ಸೋಲು ಕಂಡಿರುವ ಪಾಕಿಸ್ತಾನ ತಂಡವೂ ಸಹ ಸೆಮಿ ಆಸೆಯನ್ನು ಕೈಬಿಟ್ಟಿಲ್ಲ. ಭಾನುವಾರ ನಡೆಯುವ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲಲಿ ಎಂದು ಪಾಕ್‌ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪಾಕಿಸ್ತಾನದ  ನಟಿ ಸೆಹರ್ ಶಿನ್ವಾರಿ, ಭಾರತ ವಿರುದ್ಧ ಜಿಂಬಾಬ್ವೆ ಗೆದ್ದರೆ ಆ ದೇಶದ ಯುವಕನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಪಾಕ್‌ ನಟಿಯ ಈ ಟ್ವೀಟ್ ವೈರಲ್‌ ಆಗಿದೆ.

- Advertisement -

ʻಪಾಕಿಸ್ತಾನ ವಿರುದ್ಧ ಭಾರತ ಗೆದ್ದರೆ ತಮ್ಮ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡುವುದಾಗಿ ಕೆಲ ದಿನಗಳ ಹಿಂದೆ ಇದೇ ನಟಿ ಟ್ವೀಟ್ ಮಾಡಿದ್ದರು.  ಆದರೆ ಪಾಕಿಸ್ತಾನದ ವಿರುದ್ಧ ಭಾರತ ರೋಚಕ ಗೆಲುವು ದಾಖಲಿಸಿತ್ತು. ಇದಾಗಿಯೂ ಪಾಕ್‌ ನಟಿ ತಮ್ಮ ಮಾತು ಮರೆತಿದ್ದರು. ಮದುವೆ ವಿಚಾರದಲ್ಲೂ  ನಟಿ ಮಾತು ತಪ್ಪಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

Join Whatsapp