ಮಸ್ಕತ್ ನಲ್ಲಿ ಪಡುಬಿದ್ರೆಯ ವ್ಯಕ್ತಿ ಮೃತ್ಯು

Prasthutha|

ಮಸ್ಕತ್:  ಇಲ್ಲಿನ ಅಲ್ ಖೂದ್ ನಗರದಲ್ಲಿ ಅಂಗಡಿ ಮಳಿಗೆ ನಡೆಸುತ್ತಿದ್ದ ಹಿದಾಯತುಲ್ಲಾ ಪಡುಬಿದ್ರೆ (48) ಎಂಬವರು ಉಸಿರಾಟದ ತೊಂದರೆ ಕಾಣಿಸಿಕೊಂಡು ಮಸ್ಕತ್ ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳೊಂದಿಗೆ ಮಸ್ಕತ್ ನ ಅಲ್ ಖೂದ್ ನಗರದಲ್ಲಿ ನೆಲೆಸಿದ್ದರು.

- Advertisement -

ಮೇ 3ರಂದು ತಡರಾತ್ರಿ ಹಿದಾಯತ್ ಅವರು ಕೊನೆಯುಸಿರೆಳೆದಿದ್ದು, ಒಮಾನ್ ಕಾನೂನು ನಿಯಮಾವಳಿ ಪ್ರಕಾರ ಎಲ್ಲ ದಾಖಲೆ ಪತ್ರಗಳನ್ನು ಒದಗಿಸಿದ ಬಳಿಕ ಮೇ 5ರಂದು ಸಂಜೆ 4ರ ಹೊತ್ತಿಗೆ ಅಮರಾತ್ ಎಂಬಲ್ಲಿನ ದಫನ ಭೂಮಿಯಲ್ಲಿ ಅಂತಿಮ ವಿಧಿವಿಧಾನವನ್ನು ನೆರವೇರಿಸಲಾಯಿತು. ದಾಖಲೆ ಪತ್ರದ ಸಿದ್ಧಪಡಿಸುವಿಕೆಯಲ್ಲಿ ಸೋಶಿಯಲ್ ಫೋರಮ್ ಒಮಾನ್ ತಂಡವು ಸಹಕರಿಸಿತ್ತು. ಈ ಸಂದರ್ಭದಲ್ಲಿ ಮೃತರ ಪತ್ನಿಗೂ ಅಂತಿಮದರ್ಶನದ ಅವಕಾಶವನ್ನು ಕಲ್ಪಿಸಲಾಗಿತ್ತು.

ಅಂತಿಮ ವಿಧಿವಿಧಾನದಲ್ಲಿ ಸೋಶಿಯಲ್ ಫೋರಮ್ ಒಮಾನ್ ಇದರ ಸದಸ್ಯರಾದ ತಬ್ರೇಝ್ ಪಡುಬಿದ್ರೆ, ನೂರ್ ಮುಹಮ್ಮದ್, ಮುಹಿಯುದ್ದೀನ್ ಹಾಗೂ ಅಬ್ದುಲ್ ರಹೀಮ್ ಮುಂತಾದವರು ಉಪಸ್ಥಿತರಿದ್ದರು.

Join Whatsapp