ತಮಿಳುನಾಡಿನ ಜನತೆಗೆ ಬಂಪರ್ ಯೋಜನೆ ಘೋಷಣೆ ಮಾಡಿದ ಮುಖ್ಯಮಂತ್ರಿ ಸ್ಟಾಲಿನ್

Prasthutha|

- Advertisement -

ತಮಿಳು ನಾಡು :  DMK ಪಕ್ಷದ ನಾಯಕ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸ್ಟಾಲಿನ್ ಅವರು ಅಧಿಕಾರ ವಹಿಸಿಕೊಂಡ ದಿನವೇ ರಾಜ್ಯದ ಜನರಿಗೆ ಬಂಪರ್ ಘೋಷಣೆಗಳನ್ನು ಘೋಷಿಸಿದ್ದಾರೆ.

ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರಿಗೂ ಸುಮಾರು 2.7 ಕೋಟಿ ಜನರಿಗೆ ತಲಾ 4000 ರೂಪಾಯಿಯಂತೆ ಕೋವಿಡ್ ಧನ ಸಹಾಯ , ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ ಬಾದಿತ ಎಲ್ಲಾ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ  ಭರಿಸಲಿದೆ.

- Advertisement -

ರಾಜ್ಯದಲ್ಲಿ ಇನ್ನು ಮುಂದೆ ಎಲ್ಲಾ ಸಾರ್ವಜನಿಕರಿಗೆ ಕೋವಿಡ್  ಚಿಕಿತ್ಸೆ  ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯಲಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಘೋಷಿಸಿದ್ದಾರೆ.

ಮುಖ್ಯವಾಗಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಸರಕಾರಿ ಸಾಮಾನ್ಯ ಬಸ್ ಗಳಲ್ಲಿ ಉಚಿತ ಬಸ್ ಪ್ರಯಾಣವನ್ನು ಘೋಷಣೆ ಮಾಡಿದ್ದಾರೆ. 1200 ಕೋಟಿ ರೂ ಮೊತ್ತವನ್ನು ಸರಕಾರ ಸಾರಿಗೆ ಇಲಾಖೆಗೆ ಸಬ್ಸಿಡಿ ನೀಡಲಿದೆ ಎಂದು ಹೇಳಿದ್ದಾರೆ.

ಮೇ ೧೬ ರಿಂದ ಆವಿನ್ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ  3 ರೂ.ಗಳಷ್ಟು ಕಡಿಮೆ ಮಾಡುವ ತಮ್ಮ ಚುನಾವಣಾ ಭರವಸೆಗಳನ್ನು ಈಡೇರಿಸುವ ಸಲುವಾಗಿ  ಅವರು ಆದೇಶಕ್ಕೆ ಸಹಿ ಹಾಕಿದರು.

ಪ್ರಮಾಣವಚನ ಸ್ವೀಕರಿಸಿ ರಾಜಭವನದಿಂದ ಹಿಂದಿರುಗಿ ತಮ್ಮ ತಾಯಿಯನ್ನು ಗೋಪಾಲಪುರಂ ನಿವಾಸದಲ್ಲಿ  ಭೇಟಿಯಾಗಿ ಆಶಿರ್ವಾದ ಪಡೆದುಕೊಂಡರು. ನಂತರ ಪೆರಿಯಾರ್ ಸಮಾಧಿ ಬಳಿ ತೆರಳಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.

Join Whatsapp