ಭೂಗತ ಪಾತಕಿ ಛೋಟಾ ರಾಜನ್ ಕೋವಿಡ್ ಗೆ ಬಲಿ

Prasthutha|

ಮುಂಬೈ : ಕೊರೋನಾದಿಂದ ಬಳಲುತ್ತಿದ್ದ ಭೂಗತ ಪಾತಕಿ ಛೋಟಾ ರಾಜನ್ ಮೃತಪಟ್ಟಿದ್ದಾನೆ. ತೀವ್ರ ಅಸ್ವಸ್ಥಗೊಂಡಿದ್ದ ರಾಜನ್‌ನನ್ನು ನಿನ್ನೆ ತಿಹಾರ್ ಜೈಲಿನಿಂದ ಏಮ್ಸ್ ಗೆ ಸ್ಥಳಾಂತರಿಸಲಾಗಿತ್ತು. ತಿಹಾರ್ ಜೈಲಿನಲ್ಲಿ ಏಕಾಂತ ಸೆರೆವಾಸ ಅನುಭವಿಸುತ್ತಿದ್ದ ರಾಜನ್ ಬೇರೆ ಯಾವುದೇ ಖೈದಿಗಳೊಂದಿಗೆ ಸಂಪರ್ಕದಲ್ಲಿರಲಿಲ್ಲ. ಆದರೆ, ರಾಜನ್ ಗೆ ಕೊರೋನಾ ಸೋಂಕು ಹೇಗೆ ತಗುಲಿತು ಎಂದು ಜೈಲಿನ ಅಧಿಕಾರಿಗಳು ಆಶ್ಚರ್ಯಪಟ್ಟಿದ್ದಾರೆ.

- Advertisement -

ತಿಹಾರ್‌ ಜೈಲಿನಲ್ಲಿರುವ 20,000 ಕ್ಕೂ ಹೆಚ್ಚು ಕೈದಿಗಳಲ್ಲಿ ಇದುವರೆಗೆ 170 ಕೈದಿಗಳು ಮತ್ತು 60 ಪೊಲೀಸರಿಗೆ ಕೊರೋನಾ ದೃಢಪಟ್ಟಿದೆ. ರೋಗಲಕ್ಷಣಗಳಿಲ್ಲದ ಜೈಲಿನ ಯಾವುದೇ ಪೊಲೀಸರಿಂದ ರಾಜನ್ ಈ ಕಾಯಿಲೆಗೆ ತುತ್ತಾಗಿರಬಹುದು ಎಂದು ಜೈಲಿನ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Join Whatsapp