ಭಾರತ-ಚೀನಾ ಗಡಿ ಸಮಸ್ಯೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಉವೈಸಿ ಒತ್ತಾಯ

Prasthutha|

ಹೈದರಾಬಾದ್: ಗಡಿಯಲ್ಲಿರುವ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್.ಎ.ಸಿ) ಮೂಲಕ ಚೀನಾವು ಮೂಕಸೌಕರ್ಯ ಅಭಿವೃದ್ಧಿಪಡಿಸುತ್ತಿರುವ ವರದಿಯ ಬೆನ್ನಲ್ಲೇ, ಭಾರತ- ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದ ಸಂಸದ ಉವೈಸಿ ಅವರು ಈ ವಿಷಯದ ಬಗ್ಗೆ ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿದ್ದಾರೆ.

- Advertisement -

ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಉವೈಸಿ, ಸರಣಿ ಟ್ವೀಟ್ ಗಳಲ್ಲಿ “ ಗಡಿ ಪ್ರದೇಶಗಳಲ್ಲಿ ಚೀನಾದ ಮೂಲಸೌಕರ್ಯ ಅಭಿವೃದ್ಧಿಯು ಭವಿಷ್ಯಕ್ಕೆ ಅಶುಭವಾಗಿದೆ. LAC ಉದ್ದಕ್ಕೂ ಶಸ್ತ್ರಾಸ್ತ್ರಗಳು ಮತ್ತು ಪಡೆಗಳ ವ್ಯಾಪಕ ನಿಯೋಜನೆಯನ್ನು ಕಂಡಾಗ ಚೀನಾ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಗೆ ಸಿದ್ಧತೆ ನಡೆಸಿರುವುದನ್ನು ಸೂಚಿಸುತ್ತದೆ.

ಭಾರತ-ಚೀನಾ ಗಡಿಯಲ್ಲಿನ ಬಿಕ್ಕಟ್ಟಿಗೆ ಸರ್ಕಾರದ ನಿಲುವಿನ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಅವರು ಒತ್ತಾಯಿಸಿದರು.

Join Whatsapp