ನ್ಯೂ ವೆಲ್ಫೇರ್ ಅಸೋಸಿಯೇಷನ್ ಮಹಾಸಭೆ: ಅಧ್ಯಕ್ಷರಾಗಿ ಹಸೈನಾರ್ ಫರಂಗಿಪೇಟೆ

Prasthutha: January 4, 2022

ಮದೀನಾ: ನ್ಯೂ ವೆಲ್ ಫೇರ್ ಅಸೋಸಿಯೇಷನ್ ಮದೀನಾ ಮುನವ್ವರ ಇದರ ವಾರ್ಷಿಕ ಮಹಾಸಭೆಯು ಮುಬೀನ್ ಮುಲ್ಕಿಯವರ ನಿವಾಸದಲ್ಲಿ ನಡೆಯಿತು.

 ಸಭಾಧ್ಯಕ್ಷರಾಗಿದ್ದ ಹಸೈನಾರ್ ಫರಂಗಿಪೇಟೆ ನ್ಯೂ ವೆಲ್ಫೇರ್ ನ ಕಾರ್ಯಚಟುವಟಿಕೆಗಳನ್ನು ಸಭೆಯಲ್ಲಿ ವಿವರಿಸಿದರು. ಕಾರ್ಯದರ್ಶಿ ಹಬೀಬ್ ಅಳಕೆ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.

ಹಳೆಯ ಸಮಿತಿಯನ್ನು ವಿಸರ್ಜಿಸಿ, ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ಶಂಸುದ್ದೀನ್ ಉಜಿರೆ, ಅಧ್ಯಕ್ಷರಾಗಿ ಹಸೈನಾರ್ ಫರಂಗಿಪೇಟೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಬೀಬ್ ಅಳಕೆ, ಇಬ್ರಾಹೀಂ ಮುಲ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಸುರಿಬೈಲ್, ಜೊತೆಕಾರ್ಯದರ್ಶಿಗಳಾಗಿ ಶಂಸುದ್ದೀನ್ ಮುರುಗೋಳಿ, ಸಾದಿಕ್ ಮೆಲ್ಕಾರ್ ಕೋಶಾಧಿಕಾರಿಯಾಗಿ ಮುಬೀನ್ ಮುಲ್ಕಿ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ  ಶಂಸುದ್ದೀನ್ ಉಳ್ಳಾಲ, ಆಸಿಫ್ ಕುಂಜತ್ ಬೈಲ್ ಆಯ್ಕೆಯಾದರು.

ಅಝೀಝ್ ಸುರಿಬೈಲ್ ಸ್ವಾಗತಿಸಿದರು. ಹಬೀಬ್ ಅಳಕೆ ಧನ್ಯವಾದ ಸಲ್ಲಿಸಿದರು..

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!