ಕಳೆದ ಒಂದು ವರ್ಷದಲ್ಲಿ ಕೋವಿಡ್‌–19 ಸೇರಿ ಇತರೆ ಕಾರಣಗಳಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳೆಷ್ಟು ಗೊತ್ತೇ?

Prasthutha|

ನವದೆಹಲಿ: ಕಳೆದ ಒಂದು ವರ್ಷದಲ್ಲಿ ಕೋವಿಡ್‌–19 ಹಾಗೂ ಇತರ ಕಾರಣಗಳಿಂದಾಗಿ ದೇಶದಲ್ಲಿ 1,47,492 ಮಕ್ಕಳು ತಮ್ಮ ಪಾಲಕರನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

- Advertisement -

ತನ್ನ ‘ಬಾಲ ಸ್ವರಾಜ್‌ ಪೋರ್ಟಲ್‌– ಕೋವಿಡ್‌ 19’ನಲ್ಲಿ ಜನವರಿ 11 ವರೆಗೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅಪ್‌ಲೋಡ್‌ ಮಾಡಿರುವ ವಿವರಗಳನ್ನು ಆಧರಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಈ ಮಾಹಿತಿ ನೀಡಿದ್ದು, ಈ ಮಕ್ಕಳಲ್ಲಿ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡವರೂ ಸೇರಿದ್ದಾರೆ ಎಂದು ತಿಳಿಸಿದೆ.

‘ಆಯೋಗದ ಪೋರ್ಟ್‌ಲ್‌ನಲ್ಲಿನ ಮಾಹಿತಿಯಂತೆ, 10,094 ಮಕ್ಕಳು ಅನಾಥರಿದ್ದರೆ, 1,36,910 ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. ಪರಿತ್ಯಕ್ತ ಮಕ್ಕಳ ಸಂಖ್ಯೆ 488 ಇದ್ದು, ಒಟ್ಟು 1,47,492 ಮಕ್ಕಳಿಗೆ ಪಾಲನೆ ಹಾಗೂ ರಕ್ಷಣೆಯ ಅಗತ್ಯವಿದೆ’ ಎಂದು ಆಯೋಗದ ಪರ ವಕೀಲ ಸ್ವರೂಪಮಾ ಚತುರ್ವೇದಿ ತಿಳಿಸಿದ್ದಾರೆ.



Join Whatsapp