ಪಿಜ್ಜಾ ಆರ್ಡರ್ ಮಾಡಿದ್ದ ಅಜ್ಜಿಯಿಂದ ₹11 ಲಕ್ಷ ಎಗರಿಸಿದ ಖದೀಮರು!
Prasthutha: January 16, 2022

ಮುಂಬೈ: ಪಿಜ್ಜಾ ಆರ್ಡರ್ ಮಾಡಿದ ಅಜ್ಜಿಯಿಂದ ಖದೀಮರು ಬರೋಬ್ಬರಿ 11 ಲಕ್ಷ ರೂ. ಎಗರಿಸಿದ ಘಟನೆ ಮುಂಬೈನ ಅಂಧೇರಿಯಲ್ಲಿ ನಡೆದಿದೆ.
ಅಜ್ಜಿ ಆನ್‌ಲೈನ್‌ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದು, ಅದಕ್ಕಾಗಿ ಹಣ ಕೂಡ ಕಳುಹಿಸಿದ್ದರು. ಆದರೆ, ಅವರು ತಪ್ಪಾಗಿ ಬಿಲ್‌ಗಿಂತ ಹೆಚ್ಚಿನ ಹಣವನ್ನು ಕಳುಹಿಸಿಬಿಟ್ಟಿದ್ದಾರೆ. ಅದನ್ನು ಮರಳಿ ಪಡೆಯುವುದು ಹೇಗೆ? ಎಂದು ಆಕೆ ಮಾಹಿತಿಗಾಗಿ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.
ಆ ವೇಳೆ ಗೂಗಲ್ ಮಾಹಿತಿಯಂತೆ ಯಾರಿಗೋ ಕರೆ ಮಾಡಿದ್ದಾರೆ. ಆಗ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಎಂದು ಕೇಳಿ ಆ ಆ್ಯಪ್‌ನಿಂದ ಅಜ್ಜಿಯ ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ನಂತರ 11 ಲಕ್ಷಕ್ಕೂ ಹೆಚ್ಚು ಹಣವನ್ನು ಅವರ ಬ್ಯಾಂಕ್ನಿಂದ ಎಗರಿಸಿದ್ದಾರೆ.
ಘಟನೆ ಸಂಬಂಧ ಅಜ್ಜಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭವಾಗಿದೆ.
