ಕಾಂಗ್ರೆಸ್ ಮುಕ್ತ ಮಾಡುವುದೇ ನಮ್ಮ ಗುರಿ: ದೇವೇಗೌಡ

Prasthutha|

ಹಾಸನ: ಕಾಂಗ್ರೆಸ್ ಮುಕ್ತ ಮಾಡೋದೇ ನಮ್ಮ ಗುರಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

- Advertisement -

ಪಂಚರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣ, ಮಿಜೋರಾಂ ಹೊರತುಪಡಿಸಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ರಾಜಕೀಯ ಬೆಳವಣಿಗೆಯಾಗಿ ನಾವು ಕರ್ನಾಟಕದಲ್ಲಿ ಬಿಜೆಪಿ, ಮೋದಿ, ಅಮಿತ್ ಶಾ ಅವರೊಟ್ಟಿಗೆ ಹೋಗುತ್ತೇವೆ ಎಂದು ಮಾಜಿ ಪ್ರಧಾನಿ ಹೇಳಿದರು

ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈಗ ಎನ್‌ಡಿಎಗೆ ಪರ್ಯಾಯವಾಗಿ ಸುಮಾರು 46 ಪ್ರಾದೇಶಿಕ ಪಕ್ಷಗಳು ಸೇರಿ ಕಾಂಗ್ರೆಸ್ ನೇತೃತ್ವದಲ್ಲಿ ಐಎನ್ ಡಿ ಐಎ ರಚನೆ ಆಗಿದೆ. ದೇಶವನ್ನ ಆಳಿದಂತ ಒಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಇದರ ನೇತೃತ್ವ ವಹಿಸಿದೆ. ಈ ಹಿಂದೆ 2018 ರಲ್ಲಿ
ನಮ್ಮ ಪಕ್ಷ ಜೆಡಿಎಸ್‌ನಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಇದೇ ರಾಷ್ಟ್ರದ ಸೆಕ್ಯೂಲರ್ ಪಾರ್ಟಿಯ ಎಲ್ಲಾ ಮುಖಂಡರುಗಳು, ಬಿಜೆಪಿ ಬಿಟ್ಟು ಬಹುತೇಕ ಎಲ್ಲಾ ಲೀಡರ್‌ಗಳು ಕರ್ನಾಟದಲ್ಲಿ ಭಾಗಿಯಾಗಿದ್ರು. ಆಗ ನಮ್ಮನ್ನು ಅಂದರೆ ಜೆಡಿಎಸ್ ಪಕ್ಷವನ್ನು ಹೊರಗಿಡಲೇಬೇಕು ಅಂತಾ ತೀರ್ಮಾನ ಮಾಡಿದವರು ಯಾರು? ಕುಮಾರಸ್ವಾಮಿ ಸರ್ಕಾರ ತೆಗಿಲೇ ಬೇಕು ಅಂತಾ ತೀರ್ಮಾನ ಮಾಡಿದವರು ಯಾರು ಎಂದು ದೇವೇಗೌಡ ಪ್ರಶ್ನಿಸಿದರು.

- Advertisement -

ತಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಿದ ಮಾಜಿ ಪ್ರಧಾನಿ, ಆ ಸಂದರ್ಭದಲ್ಲಿ ನಿತೀಶ್ ಕುಮಾರ್ ನಾಯಕತ್ವದಲ್ಲಿ ಪ್ರಯತ್ನ ನಡೆದಿತ್ತು. ಜೆಡಿಎಸ್ ಸೇರ್ಪಡೆಯಾದರೆ ನಾವು ಖಂಡಾತುಂಡವಾಗಿ ವಿರೋಧಿಸ್ತೇವೆ ಅಂತಾ ಹೇಳಿದ್ರು. ಆ ಸಂದರ್ಭದಲ್ಲಿ ನಮ್ಮನ್ನು ದೂಡಿದ್ದು ಕಾಂಗ್ರೆಸ್ ಎಂದು ಹೇಳಿದರು.

ಆದರೆ ಆ ಸಂದರ್ಭದಲ್ಲಿ ಮೋದಿಯವರು, ಅಮಿತ್ ಶಾ ನಮ್ಮನ್ನು ವೆಲ್ ಕಮ್ ಮಾಡಿದ್ರು ಎಂದು ಬಿಜೆಪಿಯನ್ನು ದೇವೇಗೌಡ ಹೊಗಳಿದರು. ಜೆಡಿಎಸ್ ಪಕ್ಷ ಇರೋದೇ ಇಲ್ಲ, ಅದು ಲೆಕ್ಕಕ್ಕೆ ಇಲ್ಲ, ಆಟಕ್ಕೂ ಇಲ್ಲ ಎಂಬಂತೆ ಲಘುವಾಗಿ ಮಾತನಾಡಿದರು. ಮೊನ್ನೆ ಮೊನ್ನೆವರೆಗೂ ಹೀಗೆ ಮಾತಾಡ್ತಿದ್ದರು ಕಾಂಗ್ರೆಸ್ ಮುಖಂಡರು. ಕಾಂಗ್ರೆಸ್ ನ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದ ಮೋದಿ ಮತ್ತು ಅವರು ಶಾ ಅವರು ನಮ್ಮನ್ನು ವೆಲ್ ಕಮ್ ಮಾಡಿದ್ರು. ಅಲ್ಲದೇ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ, ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಹೀಗಾಗಿ ಮುಂದಿನ ರಾಜಕೀಯ ಬೆಳವಣಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ಅದಕ್ಕಾಗಿ ನಾವು ಮೋದಿ ಮತ್ತು ಅಮಿತ್ ಶಾ ಒಟ್ಟಿಗೆ ಹೋಗುತ್ತೇವೆ ಎಂದು ಹೇಳಿದ ದೇವೇಗೌಡ, ಬಿಜೆಪಿಯೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಮುಕ್ತವನ್ನಾಗಿಸಲು ಹೋರಾಟ ಮಾಡೋದು ನಮ್ಮ ಗುರಿ ಎಂದು ಹೇಳಿದ್ದಾರೆ.

Join Whatsapp