ಚೆನ್ನೈ: ಭಾರಿ ಮಳೆಗೆ 5 ಮಂದಿ ಬಲಿ

Prasthutha|

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೈಚಾಂಗ್ ಎಂಬ ಚಂಡಮಾರುತ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದ್ದು, ಚೆನ್ನೈನಲ್ಲಿ ಭಾರೀ ಮಳೆ ಸುರಿದಿದೆ. ಚೆನ್ನೈ ನನಗರ ಸುತ್ತಮುತ್ತ ತತ್ತರಿಸಿ ಹೋಗಿದೆ. ಚೆನ್ನೈನ ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣಗಳು ಸೇರಿ ಬಹುತೇಕ ಬಡಾವಣೆಗಳು ಜಲಾವೃತವಾಗಿವೆ. ಅಲ್ಲದೆ, ಭಾರಿ ಮಳೆ ಸಂಬಂಧವಾಗಿ ವಿವಿಧೆಡೆ 7 ಮಂದಿ ಸಾವನ್ನಪ್ಪಿದ್ದಾರೆ. ಚೆನ್ನೈ ನಗರದಲ್ಲಿಯೇ ಕನಿಷ್ಠ ಐದು ಜನರು ಮೃತಪಟ್ಟಿದ್ದಾರೆ.

- Advertisement -

ವೈದ್ಯನಾಥನ್ ಮೇಲ್ಸೇತುವೆ ಬಳಿಯ ಪ್ಲಾಟ್‌ಫಾರ್ಮ್‌ನಲ್ಲಿ 70 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಫೋರ್‌ಶೋರ್ ಎಸ್ಟೇಟ್ ಬಸ್ ಡಿಪೋದಲ್ಲಿ 60 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಮತ್ತೊಂದು ಶವ ಪತ್ತೆಯಾಗಿದೆ. ನಿರ್ಮಾಣ ಹಂತದ ಮನೆ ಕುಸಿದು ಇಬ್ಬರು ಛತ್ತೀಸ್​ಗಢ ಮೂಲದವರು ಮೃತಪಟ್ಟಿದ್ದಾರೆ.

ವಿಮಾನ ನಿಲ್ದಾಣದ ರನ್‌ವೇ ಜಲಾವೃತಗೊಂಡಿದ್ದರಿಂದ ವಿಮಾನಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿವೆ, ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಬೆಂಗಳೂರಿನಿಂದ ಕಾರ್ಯಾಚರಣೆಗೊಳ್ಳುವಂತೆ ಮಾಡಲಾಗಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರಾತ್ರಿ 11 ಗಂಟೆಯವರೆಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

Join Whatsapp