ನೂತನ ಕೃಷಿ ಮಸೂದೆ | ಪ್ರತಿಪಕ್ಷಗಳಿಂದ ರಾಷ್ಟ್ರಪತಿ ಭೇಟಿ

Prasthutha|

ನವದೆಹಲಿ: ಕೃಷಿ ಸುಧಾರಣಾ ಮಸೂದೆ ಅಂಗೀಕಾರವನ್ನು ವಿರೋಧಿಸಿ ಪ್ರತಿಪಕ್ಷಗಳು ರಾಜ್ಯಸಭೆಯನ್ನು ಬಹಿಷ್ಕರಿಸುತ್ತಲೇ ಇದೆ. ಸಂಸತ್ತಿನ ಮುಂಗಾರು ಅಧಿವೇಶನ ಇಂದು ಕೊನೆಗೊಳ್ಳಲಿದೆ. ರಾಜ್ಯಸಭೆ ಅಧಿವೇಶನವನ್ನು ಇಂದಿಗೆ ಕೊನೆಗೊಳಿಸಲಿದ್ದೇವೆ ಎಂದು ರಾಜ್ಯಸಭಾ ಸ್ಪೀಕರ್ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಏತನ್ಮಧ್ಯೆ, ಕೃಷಿ ಸುಧಾರಣಾ ಮಸೂದೆ ವಿರುದ್ಧ ಪ್ರತಿಪಕ್ಷಗಳು ರಾಷ್ಟ್ರಪತಿಯನ್ನು ಭೇಟಿ ಮಾಡಲಿವೆ ಎನ್ನಲಾಗಿದೆ.

- Advertisement -

ಹದಿನಾರು ಮಸೂದೆಗಳನ್ನು ಇಂದು ರಾಜ್ಯಸಭೆ ಪರಿಗಣಿಸುತ್ತಿದೆ. ಈ ತಿಂಗಳ 14ರಂದು ಪ್ರಾರಂಭವಾದ ಅಧಿವೇಶನದಲ್ಲಿ ಕೃಷಿ ಮಸೂದೆ ಮತ್ತು ಆರೋಗ್ಯ ಕಾರ್ಯಕರ್ತರ ವಿರುದ್ಧದ ದೌರ್ಜನ್ಯ ತಡೆ ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಅಂಗೀಕರಿಸಲಿದೆ.  ಅಮಾನತುಗೊಳಿಸಿದ ಸಂಸದರನ್ನು ಹಿಂಪಡೆಯದಿದ್ದನ್ನು ವಿರೋಧಿಸಿ ಪ್ರತಿಪಕ್ಷಗಳು ನಿನ್ನೆ ರಾಜ್ಯಸಭೆಯನ್ನು ಬಹಿಷ್ಕರಿಸಿದ್ದವು. ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಅವರು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು.



Join Whatsapp