ಐತಿಹಾಸಿಕ ಹೋರಾಟಕ್ಕೆ ಒಂದು ವರ್ಷ: ದೆಹಲಿಗೆ ಜಮಾಯಿಸಿದ ರೈತರು

Prasthutha|

ನವದೆಹಲಿ: ಕೇಂದ್ರ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸಂಸತ್ತು ಕಲಾಪದಲ್ಲಿ ಅಂಗೀಕಾರ ಪಡೆದಿದ್ದ ವಿವಾದಿತ 3 ಕೃಷಿ ಮಸೂದೆಗಳ ವಿರುದ್ಧದ ರೈತರ ಐತಿಹಾಸಿಕ ಹೋರಾಟಕ್ಕೆ ಇಂದಿಗೆ ಭರ್ತಿ ಒಂದು ವರ್ಷ ತುಂಬುತ್ತಿದೆ. ಇದೀಗ ಹಿಂಪಡೆಯುವುದಾಗಿ ಹೇಳಿರುವ 3 ಕೃಷಿ ತಿದ್ದುಪಡಿ ಮಸೂದೆ ಅಧಿಕೃತ ರದ್ದತಿ ಆಗುವವರೆಗೂ ದೆಹಲಿ ಗಡಿಭಾಗದಲ್ಲಿ ರೈತರು ಚಳುವಳಿ ವಾಪಸ್ ಪಡೆಯುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ಕಳೆದ ವರ್ಷದ ನವೆಂಬರ್ 26ರಂದು ರೈತರ ಚಳುವಳಿ ಆರಂಭಗೊಂಡಿತ್ತು.
ಪ್ರತಿಭಟನೆಯ ಮೊದಲ ವರ್ಷಾಚರಣೆಗೆ ಮುನ್ನ ಪಂಜಾಬ್, ಹರ್ಯಾಣ ಭಾಗದ ರೈತರು ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಭಾಗಕ್ಕೆ ಆಗಮಿಸಿದ್ದಾರೆ. ಚಳುವಳಿಯ ವಾರ್ಷಿಕ ದಿನವನ್ನು ಆಚರಿಸಿ ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭಕ್ಕೆ ಮುನ್ನ ಪ್ರತಿಭಟನೆಯಲ್ಲಿ ಭಾಗಿಯಾಗಲು ರೈತರು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ ನಿರ್ದೇಶನದಂತೆ ರೈತರು ಗಡಿಭಾಗದಲ್ಲಿ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವುದು ರೈತರ ಉದ್ದೇಶವಾಗಿದೆ.


“ನಮ್ಮ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಶೀತವನ್ನು ನಿಭಾಯಿಸಲು ಎಲ್ಲಾ ಸೌಲಭ್ಯಗಳಿವೆ, ಕಳೆದ ಚಳಿಗಾಲದಲ್ಲಿ ನಾವು ಮಾಡಿದಂತೆಯೇ ಈ ಬಾರಿ ಕೂಡ ಎಲ್ಲಾ ಸೌಲಭ್ಯ ಮಾಡಿಕೊಂಡು ಪ್ರತಿಭಟನೆಗೆ ಸಜ್ಜಾಗುತ್ತಿದ್ದೇವೆ” ಎಂದು ರೈತ ಮುಖಂಡ ಪ್ರೀತ್ಪಾಲ್ ಸಿಂಗ್ ಹೇಳುತ್ತಾರೆ. ಟಿಕ್ರಿ ಗಡಿಯ ಪಕೋರಾ ಚೌಕ್ ನಲ್ಲಿ ದೊಡ್ಡ ಟೆಂಟ್ ಅನ್ನು ಹಾಕಲಾಗುತ್ತಿದೆ. ಇನ್ನೊಂದು ಮುಖ್ಯ ವೇದಿಕೆಯಾದ ಸಿಂಘು ಗಡಿಯಲ್ಲಿಯೂ ಟೆಂಟ್ ಅನ್ನು ಹಾಕಲಾಗಿದೆ. ಜೊತೆಗೆ ರೈತ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯ ಪ್ರಾರಂಭಿಸಿವೆ.

- Advertisement -


ಮೋಗಾ, ಬಟಿಂಡಾ, ಫರೀದ್ ಕೋಟ್, ಸಂಗ್ರೂರ್ ಮತ್ತು ಅಮೃತಸರದಿಂದ ತಮ್ಮ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ಬರುವುದಲ್ಲದೆ, ರೈತರು ಎರಡು ಗಡಿ ಕೇಂದ್ರಗಳಿಗೆ ಕಾರುಗಳಲ್ಲಿ ಮತ್ತು ಸೋನಿಪತ್ ನಲ್ಲಿ ರೈಲುಗಳಲ್ಲಿ ಬರುತ್ತಿದ್ದಾರೆ. “ಹೆಚ್ಚಿನ ರೈತರು ಗೋಧಿ ಬಿತ್ತನೆ ಮಾಡಿದ್ದಾರೆ. ಎಂದು ಭಾರತೀಯ ಕಿಸಾನ್ ಯೂನಿಯನ್ ರಾಜೇವಾಲ್ ಗ್ರೂಪ್ ಪಂಜಾಬ್ ಇದರ ಪ್ರಧಾನ ಕಾರ್ಯದರ್ಶಿ ಓಂಕಾರ್ ಸಿಂಗ್ ಹೇಳಿದ್ದಾರೆ.


ಹರಿಯಾಣದ ರೈತರೂ ಎರಡು ಗಡಿ ಕೇಂದ್ರಗಳಿಗೆ ಬರುತ್ತಿದ್ದಾರೆ.” ನಮ್ಮ ಇತರೆ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುತ್ತೇವೆ” ಎಂದು ರೈತ ಮುಖಂಡ ಇಂದರ್ ಜೀತ್ ಸಿಂಗ್ ಹೇಳಿದ್ದಾರೆ. “ಪಂಜಾಬ್ನ ಪ್ರತಿ ಹಳ್ಳಿಯಿಂದ 50 ರಿಂದ 500 ರೈತರು ದೆಹಲಿ ಗಡಿಗಳಲ್ಲಿ ಜಮಾಯಿಸಿದ್ದಾರೆ. ಪಂಜಾಬ್, ಹರಿಯಾಣ ಮತ್ತು ಇತರ ರಾಜ್ಯಗಳಿಂದ ಟಿಕ್ರಿ ಗಡಿಯಲ್ಲಿ ಒಂದು ಲಕ್ಷ ರೈತರು ಸೇರಲಿದ್ದಾರ” ಎಂದು ಭಾರತೀಯ ಕಿಸಾನ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಕೊಕ್ರಿ ಕಲಾನ್ ಹೇಳಿದ್ದಾರೆ.

Join Whatsapp