ಅಜ್ಮಲ್ ಕಸಬ್ ಫೋನ್ ನಾಶಪಡಿಸಿದ್ದ ಮುಂಬೈ ಪೊಲೀಸ್ ಮುಖ್ಯಸ್ಥ: ಆಘಾತಕಾರಿ ವರದಿ ಬಹಿರಂಗ!

Prasthutha|

ಹೊಸದಿಲ್ಲಿ: 2008ರ ನವಂಬರ್ 26 ರಂದು ಮುಂಬೈ ಮಹಾನಗರಿಯ ಮೇಲೆ ದಾಳಿ ನಡೆದು ಇಂದಿಗೆ ಸರಿಯಾಗಿ 13 ವರ್ಷಗಳು ಪೂರ್ತಿಯಾಗುತ್ತಿದ್ದಂತೆಯೇ ಆಘಾತಕಾರಿ ವರದಿಯೊಂದು ಬಹಿರಂಗವಾಗಿದೆ.

- Advertisement -

ಘಟನೆಯ ವೇಳೆ ಜೀವಂತವಾಗಿ ಸೆರೆ ಸಿಕ್ಕಿದ್ದ ಅಜ್ಮಲ್ ಕಸಬ್ ನ ಮೊಬೈಲನ್ನು ಮುಂಬೈಯ ಮಾಜಿ ಪೊಲೀಸ್ ಮುಖ್ಯಸ್ಥ ಪರಂ ಬೀರ್ ಸಿಂಗ್ ಅವರು ಉದ್ದೇಶಪೂರ್ವಕವಾಗಿ ನಾಶಗೊಳಿಸಿದ್ದರು ಎಂದು ಈಗ ನಿವೃತ್ತಿ ಹೊಂದಿರುವ ಮುಂಬೈ ಸಹಾಯಕ ಪೊಲೀಸ್ ಕಮೀಷನರ್ ಸಂಶೀರ್ ಖಾನ್ ಪಠಾಣ್ ಆರೋಪಿಸಿದ್ದಾರೆ.

ಮುಂಬೈ ದಾಳಿ ನಡೆದಾಗ ಭಯೋತ್ಪಾದನಾ ನಿಗ್ರಹ ದಳದ ಡಿಐಜಿ ಆಗಿದ್ದ ಪರಂ ಬೀರ್ ಸಿಂಗ್, ಕಸಬ್ ನ ಫೋನನ್ನು 26/11 ದಾಳಿಯ ತನಿಖೆ ನಡೆಸುತ್ತಿದ್ದ ಅಧಿಕಾರಿ ರಮೇಶ್ ಮಹಾಲೆ ಅವರಿಗೆ ನೀಡಬೇಕಿತ್ತು. ಆದರೆ ಅವರು ಮಹಾಲೆ ಕೈಗೆ ನೀಡದೆ ಘಟನೆಗೆ ಮಹತ್ವದ ಸಾಕ್ಷಿಯೊದಗಿಸಬೇಕಿದ್ದ ಸಾಧನವನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಿದ್ದಾರೆ ಎಂದು ಪಠಾಣ್ ದೂರಿದ್ದಾರೆ.

- Advertisement -

ಸಂಶೀರ್ ಪಠಾಣ್ ದೂರು ನೀಡಿದ್ದ ಬಳಿಕವೂ ಯಾವುದೇ ತನಿಖೆಯಾಗದೇ ಇರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.

Join Whatsapp