ಅಮಿತ್ ಶಾ ಬಳಸುತ್ತಿರುವ ಮಫ್ಲರ್ ಒಂದರ ಬೆಲೆಯೇ 80 ಸಾವಿರ ರೂ: ಅಶೋಕ್ ಗೆಹಲೋತ್

Prasthutha|

ಜೈಪುರ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ 41 ಸಾವಿರ ರೂ. ಬೆಲೆಯ ಟೀ ಶರ್ಟ್ ಧರಿಸಿದ್ಧರು ಎಂದು ಟೀಕಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡುತ್ತಿದ್ದು, ಅಮಿತ್ ಶಾ ಅವರ ದುಬಾರಿ ಬೆಲೆಯ ಮಫ್ಲರ್ ಉಲ್ಲೇಖಿಸಿದೆ.

- Advertisement -

ಕೇಂದ್ರ ಗೃಹ ಸಚಿವ ಅಮಿತ್ ಸಾ ಅವರು ಬಳಸುತ್ತಿರುವ ಮಫ್ಲರ್ ಒಂದರ ಬೆಲೆ 80 ಸಾವಿರ ರೂ. ಆಗಿದೆ. ಬಿಜೆಪಿಯ ಇತರ ನಾಯಕರು ಎರಡೂವರೆ ಲಕ್ಷ ರೂ. ಬೆಲೆಯ ಸನ್ ಗ್ಲಾಸ್‌ಗಳನ್ನು ಧರಿಸುತ್ತಾರೆ ಎಂದು ರಾಜಸ್ಥಾನದ ಅಶೋಕ್ ಗೆಹಲೋತ್ ಹೇಳಿದ್ದಾರೆ.

ಯಾತ್ರೆಯಲ್ಲಿ ಕಾಂಗ್ರೆಸ್‌ಗೆ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ಬಿಜೆಪಿ ಬಹಳ ಚಿಂತೆಗೊಳಗಾಗಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

- Advertisement -

ಭಾರತ್ ಜೋಡೋ ಯಾತ್ರೆಯಿಂದ ಅವರಿಗೇನು ಸಮಸ್ಯೆ? ರಾಹುಲ್ ಗಾಂಧಿ ಟೀ ಶರ್ಟ್ ಬಗ್ಗೆ ಅವರು ಯಾಕೆ ಮಾತನಾಡುತ್ತಿದ್ದಾರೆ ಎಂದು ಚುರುವಿನಲ್ಲಿ ಸುದ್ದಿಗಾರರಿಗೆ ಗೆಹಲೋತ್ ಕೇಳಿದರು.

ಬಿಜೆಪಿ ನಾಯಕರು ಟೀ ಶರ್ಟ್ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.

Join Whatsapp