ಆರೆಸ್ಸೆಸ್, ವಿ.ಎಚ್.ಪಿ. ಸಂಘಟನೆಗಳು ಹುಟ್ಟುವ ಮೊದಲು ಹಿಂದೂ ಧರ್ಮಕ್ಕೆ ಅಸ್ತಿತ್ವವಿರಲಿಲ್ಲವೇ?: ಛತ್ತೀಸ್’ಗಢ ಮುಖ್ಯಮಂತ್ರಿ

Prasthutha|

ಛತ್ತೀಸ್’ಗಢ: ಆರೆಸ್ಸೆಸ್, ವಿ.ಎಚ್.ಪಿ. ಸಂಘಟನೆಗಳು ಹುಟ್ಟುವುದಕ್ಕಿಂತ ಮೊದಲು ಹಿಂದೂ ಧರ್ಮಕ್ಕೆ ಅಸ್ತಿತ್ವವಿರಲಿಲ್ಲವೇ ಎಂದು ಛತ್ತೀಸ್’ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರಶ್ನಿಸಿದ್ದಾರೆ.

- Advertisement -

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘಟನೆಗಳು ಹುಟ್ಟಿ 100 ವರ್ಷಗಳೇ ಆಗಿಲ್ಲ. ಆರೆಸ್ಸೆಸ್, ವಿ.ಎಚ್.ಪಿ. ಅನ್ನು 1925ರಲ್ಲಿ ಸ್ಥಾಪಿಸಲಾಗಿದೆ. ಇದಕ್ಕಿಂತಲೂ ಮೊದಲು ಹಿಂದೂಗಳಿಗೆ ಅಸ್ತಿತ್ವವಿರಲಿಲ್ಲವೇ?. ಆರೆಸ್ಸೆಸ್’ನವರ ಭರವಸೆಯಲ್ಲಿ ಹಿಂದೂಗಳಿದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಹಿಂದೂ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ಹಿಂದೂಗಳಿಗೆ ಎಲ್ಲರನ್ನೂ ಪ್ರೀತಿಸುವ ಮತ್ತು ಒಟ್ಟಿಗೆ ಕೊಂಡೊಯ್ಯುವ ಗುಣವಿದೆ ಎಂದು ಬಘೇಲ್ ಆರೆಸ್ಸೆಸ್’ಗೆ ತಿರುಗೇಟು ನೀಡಿದ್ದಾರೆ.

Join Whatsapp