ಬ್ರಿಟನ್ ನ 3ನೇ ಕಿಂಗ್ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆತ, ಓರ್ವನ ಬಂಧನ

Prasthutha|

ಲಂಡನ್ : ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ ರಾಣಿ ಕನ್ಸರ್ಟ್ ಕ್ಯಾಮಿಲ್ಲಾ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

- Advertisement -

ಉತ್ತರ ಇಂಗ್ಲೆಂಡ್ ನ ಯಾರ್ಕ್ ನಲ್ಲಿ ಇತ್ತೀಚೆಗೆ ನಿಧನರಾದ ರಾಣಿ 2ನೇ ಎಲಿಜಬೆತ್ ಪ್ರತಿಮೆಯನ್ನು ಅನಾವರಣಗೊಳಿಸುವ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ.

ಚಾರ್ಲ್ಸ್ ದಂಪತಿಯನ್ನು ಸ್ವಾಗತಿಸಲು ರಾಜಮನೆತನದ ಮಿಕ್ಲೆಗೇಟ್ ಬಾರ್ ನಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಪ್ರತಿಭಟನಾಕಾರರೊಬ್ಬರು ಮೂರು ಮೊಟ್ಟೆಗಳನ್ನು ಎಸೆದು, ‘ಈ ದೇಶವನ್ನು ಗುಲಾಮರ ರಕ್ತದಿಂದ ನಿರ್ಮಿಸಲಾಗಿದೆ’ ಎಂದು ಘೋಷಣೆ ಕೂಗಿದ್ದಾನೆ. ಆದರೆ ಅದೃಷ್ಟವಶಾತ್ ಚಾರ್ಲ್ಸ್ ದಂಪತಿ ಇದರಿಂದ ಪಾರಾಗಿದ್ದಾರೆ.

- Advertisement -

ತಕ್ಷಣವೇ ಕಾರ್ಯಪ್ರವೃತರಾದ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದರು.

ಇತ್ತೀಚೆಗೆ ನಿಧನರಾದ ರಾಣಿ 2ನೇ ಎಲಿಜಬೆತ್ ಪ್ರತಿಮೆಯನ್ನು ಅನಾವರಣಗೊಳಿಸುವುದು ಸೇರಿದಂತೆ ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಯಾರ್ಕ್ ಶೈರ್ ಗೆ ರಾಜ ಮನೆತನದ ದಂಪತಿ ಬಂದಿದ್ದರು.



Join Whatsapp