ಮುಂಬೈ: ಖ್ಯಾತ ಬಾಲಿವುಡ್ ನಟ ಶಾರುಕ್ ಖಾನ್ ಅವರ ನಿವಾಸ ‘ಮನ್ನತ್’ ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ) ದಾಳಿ ನಡೆಸಿದೆ ಎಂಬ ವದಂತಿಯನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ. ಪೇಪರ್ ಕೆಲಸ ಕಾರ್ಯಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಾಗಿ ಎನ್.ಸಿ.ಬಿ ಅಲ್ಲಿಗೆ ಭೇಟಿ ನೀಡಿದೆ ಎಂದು ಸ್ಪಷ್ಟಪಡಿಸಿದೆ.
ಡ್ರಗ್ ಸೇವನೆಯ ಆರೋಪದಲ್ಲಿ ಎನ್.ಸಿ.ಬಿ ಯಿಂದ ಬಂಧನಕ್ಕೊಳಗಾದ ಆರ್ಯನ್ ಖಾನ್ ಅವರನ್ನು ಮುಂಬೈ ಜೈಲಿನಲ್ಲಿ ಭೇಟಿಯಾದ ಶಾರುಕ್ ನಿವಾಸಕ್ಕೆ ಎನ್.ಸಿ.ಬಿ ಅಧಿಕಾರಿ ಭೇಟಿಯಾದುದನ್ನೇ ಮುಂದಿಟ್ಟುಕ್ಕೊಂಡು ಕೆಲವು ಮಾಧ್ಯಮಗಳು ಕಪೋಕಲ್ಪಿತ ವರದಿಗಳನ್ನು ಪ್ರಕಟಿಸಿದ್ದವು.
ಶಾರುಕ್ ನಿವಾಸಕ್ಕೆ ಎನ್.ಸಿ.ಬಿ ದಾಳಿ ನಡೆಸಿದೆ ಎಂಬ ಮಾಧ್ಯಮಗಳ ವರದಿಯನ್ನು ತನಿಖಾ ಏಜೆನ್ಸಿ ಅಲ್ಲೆಗಳೆದಿದ್ದು, ಇದು ದಾಳಿಯಲ್ಲ, ಬದಲಾಗಿ ಕೇವಲ ಪೇಪರ್ ಕೆಲಸದ ನಿಮಿತ್ತ ನಟನ ನಿವಾಸ ಮನ್ನತ್ ಗೆ ಭೇಟಿ ನಡೆಸಿತ್ತು. ಇದನ್ನೇ ಬಂಡವಾಳವನ್ನಾಗಿಸಿದ ಕೆಲವು ಮಾಧ್ಯಮಗಳು ಸುಳ್ಳು ವರದಿಗಳನ್ನು ಪ್ರಕಟಿಸಿದೆ ಎಂದು ಎನ್.ಸಿ.ಬಿ ಅಧಿಕಾರಿ ಸಮೀರ್ ವಾಂಖೆಡೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.