ಲಕ್ನೋ: ಭಾರತದ ಶೇಕಡಾ 95 ರಷ್ಟು ಮಂದಿಗೆ ಪೆಟ್ರೋಲ್ ಅಗತ್ಯವಿಲ್ಲ ಮತ್ತು ಬೆರಳೆಣಿಕೆಯಷ್ಟು ಜನ ಮಾತ್ರ ನಾಲ್ಕು ಚಕ್ರದ ವಾಹನಗಳನ್ನು ಬಳಸುತಿದ್ದಾರೆ ಎಂದು ಉತ್ತರಪ್ರದೇಶದ ರಾಜ್ಯ ಸಚಿವ ಉಪೇಂದ್ರ ತಿವಾರಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.
ಸತತ ಎರಡನೇ ದಿನಗಳಿಂದ ಪೆಟ್ರೋಲ್ ಮತ್ತು ಇಂಧನ ಬೆಲೆಯೇರಿಕೆ ಆಗುತ್ತಿರುವ ಕುರಿತು ಈ ಮೇಲಿನಂತೆ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.
2014 ರಿಂದ ಸರ್ಕಾರ ನಿರಂತರ ಪೆಟ್ರೋಲ್ ಸೇರಿದಂತೆ ಅಗತ್ಯ ಬೆಲೆಯೇರಿಕೆ ನಿರ್ವಹಿಸುತ್ತಿರುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೋದಿ ಮತ್ತು ಆದಿತ್ಯನಾಥ್ ಸರ್ಕಾರದ ಅವಧಿಯಲ್ಲಿ ಜನರ ತಲಾ ಆದಾಯ ದ್ವಿಗುಣವಾಗಿದೆ ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರ ತಲಾ ಆದಾಯಕ್ಕೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ತುಂಬಾ ಕಡಿಮೆ ಎಂದು ಉತ್ತರಿಸಿ ನಗೆಪಾಟಲಿಗೀಡಾದರು.